ವಿಷ ಸೇವಿಸಿ ಕೃಷಿಕ ಸಾವು

ಕೊಡ್ಲಿಪೇಟೆ : ಸಮೀಪದ ಬೆಸೂರು ಗ್ರಾಮದ ಕೃಷಿಕ ರೇವಣ್ಣ (60 ) ವಿಪರೀತ ಸಾಲಬಾದೆಯಿಂದ ಮನದೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಾಫಿ.ಕಾಳು ಮೆಣಸು, ಶುಂಠಿ, ವ್ಯವಸಾಯದ ಜೋತೆ ಹ್ಯೆನುಗಾರಿಕೆಯನ್ನು ಮಾಡಿಕೊಂಡು ಪತ್ನಿ ಇಬ್ಬರು ಮಕ್ಕಳೊಂದಿಗೆ  ಜೀವನ ಸಾಗಿಸುತ್ತಿದ್ದರು. 

ಬ್ಯಾಂಕ್ ಹಾಗೂ ಸಂಘಗಳಿಂದ ಮತ್ತು ಕೆಲವಾರು ಕಡೆ ಕ್ಯೆ ಸಾಲ ಮಾಡಿಕೊಂಡಿದ್ದು ಮಗಳ ಮದುವೇ ಮತ್ತು ಮನೆ ಕಟ್ಟಲು ಮಾಡಿದ್ದ ಸಾಲವು ಬಾಕಿಯಿತ್ತು ಕಳೆದ ಬಾರಿ ಬೆಳೆದ ಶುಂಠಿ ಬೆಳೆಗೂ ಸೂಕ್ತ ಧರ ಸಿಗದೆ ನಷ್ಟ ಅನುಭವಿಸಿದ್ದರು. ಇದರಿಂದ ಜೀವನದಲ್ಲಿ ಏಳಿಗೆ ಕಾಣದ ಬಗ್ಗೆ ಪುತ್ರ ಹರ್ಷಿತ್ ನೊಂದಿಗೆ ಹೇಳಿಕೊಂಡು ದುಖಿಃಸುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ರಾತ್ರಿ ಮನೆಯ ತಾರಸಿಯ ಮೇಲೆ ಕುಳಿತು ವಿಷ ಸೇವನೆ ಮಾಡಿದ್ದು ಊಟಕ್ಕೆ ಕರೆಯಲೆಂದು ಮೇಲೆ ನೋಡಿದಾಗ ತಂದೆ ರೇವಣ್ಣ ಅಸ್ವಸ್ಥರಾಗಿದ್ದು ಕಂಡು ಬಂತು ಸಂಬಧಿಕರಿಗೆ ತಿಳಿಸಿ ಅವರೊಂದಿಗೆ ಶನಿವಾರಸಂತೆ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಪರಿಕ್ಷಿಸಿದ ವ್ಯೆದ್ಯರು ಮ್ರತಪಟ್ಟಿರುವುದಾಗಿ ತಿಳಿಸಿದರೆಂದು ಮಗ ಹರ್ಷಿತ್ ಶನಿವಾರಸಂತೆ ಠಾಣೆಯಲ್ಲಿ ನೀಡಿದ ಪುಕಾರಿನಲ್ಲಿ ತಿಳಿಸಿದ್ದಾರೆ.

ದೂರಿನನ್ವಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

error: Content is protected !!