ವಿಷ್ಣು ದಾದಾ ಪ್ರತಿಮೆ ತೆರವಿಗೆ ಅಸಮಾಧಾನ

ಬೆಂಗಳೂರು : ಪ್ರತಿಷ್ಠಾಪನೆಯಾಗಿರುವ ಪ್ರತಿಮೆ ರಾತ್ರೋ ರಾತ್ರಿ ಯಾರಿಗೂ ಹೇಳದೇ ತೆಗೆಯುವುದು ಎಷ್ಟು ಸೂಕ್ತ ಎಂದು ನಟ ಅನಿರುದ್ಧ್ ಪ್ರಶ್ನಿಸಿದ್ದಾರೆ.

ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಅನಿರುದ್ಧ್, ಈ ರೀತಿಯ ಕೆಲಸಗಳಿಂದ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದಂತೆ ಆಗಲ್ವಾ? ಇದರಿಂದ ಅಭಿಮಾನಿಗಳಿಗೆ ದುಃಖ ಆಗುತ್ತೆ. ವಿಷ್ಣುವರ್ಧನ್ ಅಪ್ಪಾಜಿ ಪ್ರತಿಮೆಯನ್ನ ಯಾರು ತೆಗೆದ್ರು ಮತ್ತು ಯಾಕೆ ತೆಗೆದರು ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರಾಗಿರುವ ಸೋಮಣ್ಣ ಅವರ ಮಾತುಗಳಿಗೆ ನಾವು ಗೌರವ ನೀಡುತ್ತೇವೆ. ಒಂದು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡುವಾಗಲೇ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಪ್ರತಿಷ್ಠಾಪನೆ ವಿಚಾರದಲ್ಲಿ ಯಾವ ತೊಂದರೆಯೂ ಇಲ್ಲ ಅಂದ ಮೇಲೆ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ.

ಪ್ರತಿ ಬಾರಿಯೂ ಅಪ್ಪಾಜಿ ಅವರ ಬಗ್ಗೆಯೇ ಈ ರೀತಿ ಯಾಕೆ ಆಗ್ತಿದೆ. ಒಂದು ವೇಳೆ ಪ್ರತಿಮೆ ಸ್ಥಳಾಂತರಿಸುವದಿದ್ದರೆ ಎಲ್ಲರ ಜೊತೆ ಮಾತುಕತೆ ನಡೆಸಿ ಗೌರವಯುತವಾಗಿ ತೆಗೆಯಬಹದಿತ್ತು ಎಂದು ತಿಳಿಸಿದರು.

error: Content is protected !!