ವಿಶ್ವ ಮೋಟೋದಲ್ಲಿ ‘ಯಶ್ವಂತ್ ಕಾಳಪ್ಪ’

ಬೈಕ್ ರೇಸಿಂಗ್,ಹಿಲ್ ಕ್ಲೈಂಬಿಂಗ್,ಡರ್ಟ್ ರೇಸ್ ಹೀಗೆ ಒಂದಾ ಎರಡಾ.. ಇದೆಲ್ಲಾ ಕೊಡಗಿನ ಹುಡುಗರದ್ದು ಸರ್ವೇಸಾಮಾನ್ಯ ಅಂತಹದರಲ್ಲಿ 2018ರಲ್ಲಿ ಟ್ರಂಪ್ ಟೈಗರ್ ಖರೀದಿಸಿ,ಹಿಮಾಲಯದ ಭಾರತ ಚೀನಾ ಗಡಿಯ ತುತ್ತತುದಿ ಶಿಖರ ಕಾರ್ ದುಂಗ್ ಲೇ ಲಡಾಕ್,ಲೋಮಂತಾಂಗ್ ಗೆ ಬೈಕ್ ಸವಾರಿ ನಡೆಸಿದ ಕೊಡಗಿನ ಕಂಡಂಗಾಲದ ಯುವಕನ ಹಸರೇ ಯಶ್ವಂತ್ ಕಾಳಪ್ಪ.

ಬಿಗ್ ಬೈಕಿಂಗ್ ಕಮ್ಯೂನ್ ಕಂಪೆನಿಯ ಪ್ರಚಾರದ ಹೊಣೆ ಹೊತ್ತು ತ್ತ ಟ್ರಂಪ್ ಟೈಗರ್ ಬೈಕ್ ನಲ್ಲಿ ವಿಶ್ವ ಮೋಟೋ ಯೋಗವನ್ನು ಜೂನ್ 21ರಂದು ಬೈಕ್ ರೈಡರ್ ಸಾಧಕರು ತಮ್ಮ ಪರಿಶ್ರಮ ಜೊತೆಗೆ ಯೋಗದ ಮಾಡುವ ಮೂಲಕ ಆರೋಗ್ಯ ಕಾಪಾಡುವ ಬಗ್ಗೆ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿರುವ ಯಶ್ವಂತ್ ,ಮೋಟೋ ಯೋಗಕ್ಕೆ ತನ್ನ ಕಂಪೆನಿಯವರ ಕೋರಿಕೆಯಂತೆ ಕೊಡಗಿನ ಕಾಫಿ ಎಸ್ಟೇಟ್ ಮದ್ಯೆ ತೆಗೆದ ಫೋಟೋ “BIG BIKING COMMUNE” ತನ್ನ ವೆಬ್ ನಲ್ಲಿ ಇವರ ಫೋಟೋ ಪ್ರಸಾರ ಮೂಲಕ ಪ್ರಪಂಚಕ್ಕೆ ಪ್ರಚಾರ ಮಾಡಿದೆ.