ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಎಲ್ಲರೂ ಕೈ ಜೋಡಿಸಿ; ಜಿಲ್ಲಾಧಿಕಾರಿ

ಮಡಿಕೇರಿ ಸೆ.22:-ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಪುನರಾವಲೋಕನ ಶೀರ್ಷಿಕೆಯಡಿಯಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಪ್ರವಾಸೋದ್ಯಮ-2022ರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪ್ರವಾಸೋದ್ಯಮ ಪುನರಾವಲೋಕನ ಸಂದೇಶದೊಂದಿಗೆ ಸೆಪ್ಟೆಂಬರ್, 27 ರಂದು ಬೆಳಗ್ಗೆ 6.30 ಗಂಟೆಗೆ ನಗರದ ಗದ್ದುಗೆಯಿಂದ ರಾಜಸೀಟಿನವರೆಗೆ ವಾಕ್‍ಥಾನ್ ರ್ಯಾಲಿ ಮಾಡಲಾಗುತ್ತದೆ. ಬಳಿಕ  ಬೆಳಗ್ಗೆ 10.30 ಗಂಟೆಗೆ ಹೋಟೆಲ್ ಮಯೂರ ವ್ಯಾಲಿವ್ಯೂ ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಪುನರಾವಲೋಕನ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕರಿಗೆ ಮತ್ತು ವಿವಿಧ ಸ್ತರಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಪ್ಲಾಸ್ಟಿಕ್ ಬಾಟಲಿ ಡ್ರಾಪ್ ಈಗಾಗಲೇ ರಾಜಸೀಟಿನಲ್ಲಿ ನಿರ್ಮಿಸಲಾಗಿದೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಪ್ಲಾಸ್ಟಿಕ್ ಉತ್ಪನ್ನಗಳಾದ ಬಾಟಲಿ ಮತ್ತು ಇನ್ನಿತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪ್ಲಾಸ್ಟಿಕ್ ಬಾಟಲಿ ಡ್ರಾಪ್‍ಗಳಲ್ಲಿ ಹಾಕುವಂತಾಗಬೇಕು ಎಂದು ಅವರು ಹೇಳಿದರು. 
ಶೀಘ್ರದಲ್ಲಿಯೇ ರಾಜಸೀಟಿನಲ್ಲಿ ಗ್ರೇಟರ್ ರಾಜಸೀಟು ಅನ್ನು ಉದ್ಘಾಟಿಸಲಾಗುವುದು. ಪ್ರವಾಸೋದ್ಯಮವನ್ನು ಆಕರ್ಷಿಸುವ ನಿಟ್ಟಿನಲ್ಲಿ ವಾರಾಂತ್ಯದ ವೇಳೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡುವ ಬಗ್ಗೆ ಚಿಂತಿಸಲಾಗುವುದು. ಇದರಿಂದ ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಹೋಂ ಸ್ಟೇ, ಹೋಟೆಲ್, ಟೂರ್ಸ್ ಅಂಡ್ ಟ್ರಾವೆಲ್ ಇನ್ನಿತರ ಅಸೋಷಿಯೇಷನ್ ಅವರು ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರವಾಸೋದ್ಯಮ ದಿನದ ಯಶಸ್ಸಿಗೆ ಕೈಜೋಡಿಸುವಂತೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಳ್ಳಾಲ್ ಅವರು ಮಾತನಾಡಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸಾರ್ವಜನಿಕರಿಗೆ ಛಾಯಾಗ್ರಹಣ ಸ್ಪರ್ಧೆ-ವಿಷಯ ಅನ್-ಸೀನ್ ಕೂರ್ಗ್. ಮೊಬೈಲ್ ಮತ್ತು ಡಿಎಸ್‍ಎಸ್‍ಆರ್ ಫೋಟೋಗಳನ್ನು ಕಳುಹಿಸಬಹುದು. ಆಯ್ದ ಫೋಟೋಗಳನ್ನು ಜಿಲ್ಲಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.

ಕಿರು ಚಿತ್ರ ಸ್ಪರ್ಧೆ/ಸಾರ್ಟ್ ಮೂವಿ- ವಿಷಯ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ(ಟೂರಿಸಂ ಅಂಡ್ ಡೆವಲಪ್‍ಮೆಂಟ್), ಅವಧಿ ಗರಿಷ್ಠ 2 ನಿಮಿಷಗಳು. ಮುಕ್ತ ಪ್ರವೇಶವಿರುತ್ತದೆ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ-ವಿಷಯ ಪ್ರವಾಸೋದ್ಯಮದ ಪುನರಾವಲೋಕನ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 1000 ಪದಗಳ ಮಿತಿ, ಕಾಲೇಜು ವಿದ್ಯಾರ್ಥಿಗಳಿಗೆ 2000 ಪದಗಳ ಮಿತಿ, ಪ್ರತಿ ವಿಭಾಗದಲ್ಲಿ 3 ಬಹುಮಾನ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಛಾಯಾಚಿತ್ರಗಳು, ಕಿರುಚಿತ್ರ, ಪ್ರಬಂಧವನ್ನು ಇ-ಮೇಲ್ ವಿಳಾಸ adkodagutourism@gmail.com, ವಿಳಾಸ, ಫೋನ್ ನಂಬರ್ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಹೆಸರು ಕಡ್ಡಾಯವಾಗಿ ನಮೂದಿಸಿರಬೇಕು. ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರವೇಶಕ್ಕೆ ಸೆಪ್ಟೆಂಬರ್, 24 ಕೊನೆಯ ದಿನವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಷಿಯೇಷನ್‍ನ ಅಧ್ಯಕ್ಷರಾದ ಚೆಯ್ಯಂಡ ಸತ್ಯ ಅವರು ಮಾತನಾಡಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೆಳಗ್ಗೆ 6.30 ಗಂಟೆಯಿಂದ ನಗರದ ಗದ್ದುಗೆಯಿಂದ ರಾಜಸೀಟಿನವರೆಗೆ ವಾಕ್‍ಥಾನ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಾಜಸೀಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಸ್ವಚ್ಚತಾ ಕಾರ್ಯ ನಡೆಸಲಾಗುವುದು ಎಂದರು.

ಹೋಂ ಸ್ಟೇ ಅಸೋಷಿಯೇಷನ್‍ನ ಕಾರ್ಯದರ್ಶಿ ಮೋಂತಿ ಗಣೇಶ ಅವರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನೀಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ದಸರ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ 10 ದಿನಗಳ ಕಾಲ ವಾಹನ ತೆರಿಗೆ ವಿನಾಯಿತಿ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ನಗರಸಭೆ ಆರೋಗ್ಯ ಶಾಖೆಯ ಎಇಇ ಸೌಮ್ಯ, ಪ್ರವಾಸೋದ್ಯಮ ಇಲಾಖೆಯ ಸಂಯೋಜಕರಾದ ಜತ್ತೀನ್ ಬೋಪಣ್ಣ,  ದುಬಾರೆ ರೀವರ್ ರ್ಯಾಪ್ಟಿಂಗ್ ಅಸೋಷಿಯೇಷನ್‍ನ ಅಧ್ಯಕ್ಷರಾದ ವಸಂತ್ ಹಲವು ಮಾಹಿತಿ ನೀಡಿದರು.

error: Content is protected !!