fbpx

ವಿಶ್ವ ಛಾಯಾಗ್ರಾಹಕರ ದಿನದ ವಿಶೇಷ

ಆಗಸ್ಟ್ 19, 2020 ಇಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನಾಗಿ ಜಗತ್ತಿನಾದ್ಯಂತ ಆರಿಸಲಾಗುತ್ತಿದೆ. Photography ಎಂದರೆ ‘ಬೆಳಕಿನ ಜೊತೆ ಚಿತ್ರಿಸುವುದು’ ಎಂದು. ಈ ಪದ ಮೊದಲ ಬಾರಿಗೆ ಬಳಸಿದ್ದು ಬ್ರಿಟೀಷ್ ವಿಜ್ಞಾನಿ ಸರ್ ಜಾನ್ ಹರ್ಷೆಲ್  1839ರಲ್ಲಿ.

ವಿಶ್ವ ಛಾಯಾಗ್ರಹಣದ ದಿನವಾದ ಇಂದು ಕೆಲವು ಪೊಟೋಗಳು ಮತ್ತೆ ಅವುಗಳ ಹಿಂದಿನ ಕಥೆಯನ್ನು ನೆನೆಪಿಸಿಕೊಳ್ಳುವುದಾದರೆ…

ಪೊಟೋ ಕ್ಲಿಕ್ಕಿಸಲು ಚರಕದಲ್ಲಿ ಬಟ್ಟೆ ನೇಯಿವುದು ಕಲಿಯಬೇಕಾಯಿತು

ಇದು 20ನೇ ಶತಮಾನದ ಅತಿ ಪ್ರಸಿದ್ಧ ಭಾವ ಚಿತ್ರವಾಗಿದ್ದು, ಬಹಳಷ್ಟು ಸಂದೇಶಗಳನ್ನು ನೀಡುವಂತಿತ್ತು. ‘ಲೈಫ್’ ಮ್ಯಾಗಜಿನ್ ಮೊದಲ ಮಹಿಳಾ ಕ್ಯಾಮರಾ ಮೆನ್ ಮಾಗ್ರೆ೯ಟ್ ಚೌಕ್ ವೈಟ್ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಇಲ್ಲಿಗೆ ಬಂದಿದ್ದರು. ಬಂದು ಗಾಂಧಿ ಅವರು ಕಾದಿ ಬಟ್ಟೆಯನ್ನು ಚರಕದಲ್ಲಿ ನೇಯುವ ದೃಶ್ಯ ಸೆರೆ ಹಿಡಿಯಬೇಕೆಂದು ಬಯಸಿದರು. ಆದರೆ ಅವರ ಕಾರ್ಯದರ್ಶಿಗಳು ಛಾಯಾಗ್ರಾಹಕಿಗೆ ಚರಕದಲ್ಲಿ ಬಟ್ಟೆ ನೇಯುವುದು ಕಲಿತರೆ‌ ಮಾತ್ರವೇ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಿಡುವುದಾಗಿ ಹೇಳಿದರು‌. ನಂತರ ಅದಕ್ಕೆ ಚರಕದಲ್ಲಿ ನೇಯುವುದನ್ನು ಕಲಿತ ನಂತರ ಈ ಚಿತ್ರ ಕ್ಲಿಕ್ಕಿಸಿದರು‌. ಅಂದು ಗಾಂಧಿ ಅವರು ಮೌನ ವೃತದಲ್ಲಿ ಇದ್ದಿದ್ದರಿಂದ ಮಾತನಾಡಿಸಲು ಕೂಡ ಮಾರ್ಗ್ರೆಟ್ ಅವರಿಗೆ ಸಾಧ್ಯವಾಗಲಿಲ್ಲ.


ನಕ್ಕು ಸುಸ್ತಾಗಿ ನಾಲಿಗೆ ಹೊರ ಹಾಕಿ ಪೋಸು ಕೊಟ್ಟರು

ಪೊಟೋಗ್ರಾಫರ್ ಆರ್ಥರ್ ಸಸ್ಸಿ ಅವರು ವಿಜ್ಞಾನಿಗಳಾಗಿದ್ದ  ಐನ್ಸ್ಟೀನ್ ಅವರ 72ನೇ ಹುಟ್ಟು ಹಬ್ಬಕ್ಕೆ ಅವರ ನಗು‌ಮುಖದ ಒಂದು ಪೋಸ್ ಕ್ಲಿಕ್ಕಿಸಬೇಕು ಎಂದು ಹೋಗಿದ್ದರು. ನಕ್ಕು ನಕ್ಕು ಸಾಕಾಗಿದ್ದ ಐನ್ಸ್ಟೀನ್ ಆರ್ಥರ್ ಅತ್ತ ತಿರುಗಿ ನಾಲಿಗೆ‌ ಹೊರಗೆ ಹಾಕಿ ನಗುವ ಭಂಗಿಯಲ್ಲಿ ಪೊಸು ಕೊಟ್ಟರು. ಆ ಪೊಟೋ ಅನಿರೀಕ್ಷಿತ ಎಂಬಂತೆ ಬಾರಿ‌ ಪ್ರಶಂಸೆ ಪಡೆಯಿತು.


ಬರಪೀಡಿತತೆಯ ಭೀಕರ ಪಟ!

ಅದು ಉಗಾಂಡಾ ದೇಶದಲ್ಲಿ ಭಾರೀ ಬರ ತಲೆದೂರಿತು. ಎಲ್ಲೆಲ್ಲೂ ಹಸಿವು, ಅಸಹನೆ, ಆಕ್ರಂದನ ಮತ್ತು ಸಂಭವಿಸುತ್ತಿದ್ದ ಸಾವುಗಳು ನಿರಂತರವಾಗಿತ್ತು. ಅದೇ ಸಮಯದಲ್ಲಿ ಮೈಕ್ ವೆಲ್ಸ್ ಎಂಬ ಛಾಯಾಗ್ರಹಣ ಉಗಾಂಡಾದ ಕರಮೊಜೋದಲ್ಲಿ ಈ ಪೊಟೋ ತೆಗೆದಿದ್ದ. ಇದರಲ್ಲಿ ಉಗಾಂಡದ ದುಸ್ತರ ಬರ ಪರಿಸ್ಥಿತಿಯ ಕಟ್ಟಿಕೊಡುವಂತೆ ಇತ್ತು. ಇದರಲ್ಲಿ ಅಪೌಷ್ಠಿಕಯುಕ್ತ ಉಗಾಂಡಾದ ಬರ‌ಪೀಡಿತ ಸಣಕಲು ಹುಡುಗ ಅವನ‌ ಕೈಯನ್ನು ಮಿಷನರಿಯ ವ್ಯಕ್ತಿ ಒಬ್ಬನ ಕೈ ಮೇಲೆ ಇಟ್ಟಿರುವ ದೃಶವಿದೆ ಈ ಚಿತ್ರದಲ್ಲಿ. ನಂತರ ಈ ಪೊಟೋಗೆ ಮೈಕ್ ವೆಲ್ಸ್ ‘World Press Photo Award’ ಪಡೆದರು‌.


ಮುದ್ದು ಮಗುವಿನ ಭಯಾನಕ ಚಿತ್ರ

1984ರಲ್ಲಿ ಭಾರತದಲ್ಲಿ ಭೂಪಾಲ್ ಗ್ಯಾಸ್ ದುರಂತವಾಯಿತು. ಅದರಲ್ಲಿ 15,000 ಜನರು ಮರಣ ಹೊಂದಿ, 5,58,125 ಜನರು ಗಾಯಾಳುಗಳಾದರು. ದೇಶವೇ ಶೋಕದಲ್ಲಿ ಮುಳುಗುವಂತಹ ಘಟನೆ ಇದಾಗಿತ್ತು. ಆ ಸ್ಥಳಕ್ಕೆ ಪ್ಯಾಬ್ಲೋ ಬರ್ತಲೊಮೇವ್ ಹಾಗು ರಘು ರೈ ತಲುಪಿ ತಮ್ಮ ಕ್ಯಾಮರಾದೊಂದಿಗೆ ಅಪರೂಪದ ದೇಶ್ಯಗಳ ಹುಡುಕಾಟದಲ್ಲಿ ಇದ್ದರು. ಆಗ ಮುದ್ದು ಮಗುವನ್ನು ಕಳೆದುಕೊಂಡ ತಂದೆ ಅವಳ ಕಳೆಬರವನ್ನು ಹೂಳುವ ದೃಶ್ಯವನ್ನು ಸೆರೆ ಹಿಡಿಯಲಾಗಿತ್ತು. ಇದು ಘಟನೆಯ ಭಯಾನಕತೆಯನ್ನು ವಿವರಿಸುವಂತಿತ್ತು.


ತಾಯಿ ಮಗುವಿನ ದೈಯನೀಯ ದೃಶ್ಯ

ನೈಜಿರ್ ದೇಶದ ಬಹುವಾದಲ್ಲಿ ಆಹಾರ ಕೇಂದ್ರದಲ್ಲಿ ಅಪೌಷ್ಠಿಕತೆಯಿಂದ ಬಳಲಿ ಕೃಷವಾಗಿರುವ ಸ್ಥಿತಿಯಲ್ಲಿರುವ ಚಿತ್ರ ಮನ ಕಲುಕುವಂತಿತ್ತು. ಆ ತಾಯಿಯ ತುಟಿ ಮೇಲೆ ಸಣಕಲು ದೇಹದ ಮಗು ತನ್ನ  ಚಿಕ್ಕ ಕೈ ಇರಿಸಿದ ಚಿತ್ರ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು.


ಸುದ್ದಿ ನೀಡುವ ಪತ್ರಕರ್ತರೆಷ್ಟು ಮುಖ್ಯವೇ ಅದಕ್ಕಿಂತ ಒಂದು ಪಟ್ಟು ಕ್ಯಾಮರಾಮೆನ್ಗಳೇ ಪ್ರಮುಖವಾಗುತ್ತಾರೆ. ಏಕೆಂದರೆ ಸಾವಿರ ಪದಗಳು ಹೇಳುವುದನ್ನು ಒಂದು ಭಾವ ಚಿತ್ರ ಹೇಳ ಬಲ್ಲದು‌. ಅಂತಹ ಭಾವ ಚಿತ್ರಗಳನ್ನು ತಮ್ಮೆಲ್ಲಾ ಭಾವನಾತ್ಮಕತೆಯನ್ನು ಅದುಮಿಟ್ಟುಕೊಂಡು ಸಂವೇದನಾಶೀಲತೆಯೊಂದಿಗೆ ಕ್ಯಾನತಾದಲ್ಲಿ ಸೆರೆ ಹಿಡಿಯುವ ಎಲ್ಲಾ ಛಾಯಾಗ್ರಾಹಕರಿಗೂ ‘ಹ್ಯಾಪಿ ಫೊಟೋಗ್ರಾಫಿ ಡೇ’
                                          ಸಂಗ್ರಹ ಲೇಖನ
                                            ಸಂಪಾದಕರು

error: Content is protected !!