ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಛಾಯಾಚಿತ್ರ ಸ್ಪರ್ಧೆ

ಕೊಡಗು ಪತ್ರಕರ್ತರ ಸಂಘ(ರಿ) ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಪತ್ರಕರ್ತ ಕವನ್ ಕಾರ್ಯಪ್ಪ ಪ್ರಥಮ, ಮಡಿಕೇರಿಯ ಅಶೋಕ್ ದ್ವಿತೀಯ, ಚೆಯ್ಯಂಡಾನೆ ಅಶ್ರಫ್ ತೃತೀಯ, ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಮಡಿಕೇರಿಯ ಲತೀಶ್ ಪೂಜಾರಿ(ಪ್ರ), ಸಿದ್ದಾಪುರದ ಗುರುದರ್ಶನ್(ದ್ವಿ), ಅಶ್ರಫ್(ತೃ) ಬಹುಮಾನ ಪಡೆದರು.
ಪದವಿ ಕಾಲೇಜುಗಳ ವಿಭಾಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಹಬೀಜ್ ರುಮಾನ್(ಪ್ರ), ಕುಶಾಲನಗರದ ಎಂಜಿಎಂ ಪದವಿ ಕಾಲೇಜಿನ ಗಗನ್(ದ್ವಿ), ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ತರುಣ್(ತೃ) ಹಾಗೂ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಬಿಟಿಸಿಜಿ ಕಾಲೇಜಿನ ಆಸ್ಪದ್(ಪ್ರ), ಕುಶಾಲನಗರ ಎಂಜಿಎಂ ಕಾಲೇಜಿನ ಗಗನ್(ದ್ವಿ) ಹಾಗೂ ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮಹೇಂದ್ರ(ತೃ) ಬಹುಮಾನ ಪಡೆದರು.