fbpx

ವಿಶ್ವ ಕುಂದಾಪುರ ಕನ್ನಡ ದಿನ(ಭಾಷಿಯಲ್ಲ ಬದ್ಕ್)

ಮೇಜರ್ |ಡಾ| ಕುಶ್ವಂತ್ ಕೋಳಿಬೈಲು


ತೊಂಬತ್ತರ ದಶಕದಲ್ಲಿ ಅವಿಭಜಿತ ಉಡುಪಿ ದಕ್ಷಿಣಕನ್ನಡ ಜಿಲ್ಲೆಯ ನವೋದಯ ಶಾಲೆ ಹೆಬ್ರಿಯಲ್ಲಿತ್ತು. ಆರನೆಯ ತೆರಗತಿಯನ್ನು ನಾನು ಓದಿದ್ದು ಅದೇ ಹೆಬ್ರಿಯ ನವೋದಯ ಶಾಲೆಯಲ್ಲಿ.. ಸುಳ್ಯ ಮತ್ತು ಭಾಗಮಂಡಲ ಹೇಳಿ ಕೇಳಿ ಅರೆಭಾಷೆಯ ತವರುಮನೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕನ್ನಡ, ತುಳು ಮಾತ್ರ ಇದೆಯೆಂಬ ನನ್ನ ಭ್ರಮೆ ಹೆಬ್ರಿ ತಲುಪಿದ ನಂತ ದೂರವಾಯಿತು.

ಈ ಕುಂದಾಪ್ರ ಕನ್ನಡ ಭಾಷೆ ನಮ್ಮ ಅರೆಭಾಷೆ ರೀತಿಯಲ್ಲಿದೆಯೆಂದು ಅನೇಕ ಬಾರಿ ಅನಿಸಿದ್ದಿದೆ. ಆ ಭಾಷೆಯಲ್ಲಿ ಇನ್ನೊಬ್ಬರು ಮಾತನಾಡುವುದನ್ನು ಕೇಳುವುದೇ ಒಂದು ಮನೋರಂಜನೆ. ಇತ್ತೀಚಿನ ಕೆಲವು ವರ್ಷಗಳಿಂದ ಕುಂದಾಪ್ರ ಕನ್ನಡವನ್ನು ಬೆಳಸಲು ಆ ಭಾಷೆಯ ಅನೇಕ ಪ್ರತಿಭಾವಂತರು ಮಾಡುತ್ತಿರುವ ವಿನೂತನ ಮಾದರಿಯ ಪ್ರಯೋಗಗಳನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ್ದೇನೆ.

ಆ ಊರಿನ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮಿಂಚುತ್ತಿರುವ ಕಾರಣ ಕನ್ನಡದ ಮೈನ್ ಸ್ಟ್ರೀಮ್ ಸಿನಿಮಾದಲ್ಲೂ ಕುಂದಾಪ್ರ ಕನ್ನಡ ಮಾತನಾಡುವ ಪಾತ್ರಗಳು ಆ ಭಾಷೆಯ ಸೊಬಗನ್ನು ರಾಜ್ಯಕ್ಕೆ ಪರಿಚಯಿಸಿವೆ..

ಪ್ರಾದೇಶಿಕ ಭಾಷೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತೆ ಮೈಕೊಡವಿ ನಿಲ್ಲುತ್ತಿರುವುದು ನಮ್ಮ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಒಂದು ಆಹ್ಲಾದಕರವಾದ ಬೆಳವಣಿಗೆ!! ನನ್ನದೇ ಮಾತುಗಳಲ್ಲಿ ಹೇಳಬೇಕೆಂದರೆ ಕುಂದಾಪ್ರ ಕನ್ನಡ, ಅರೆಭಾಷೆ, ಕೊಡವ, ತುಳು ಹಾಗು ಇತರೆ ಪ್ರಾದೇಶಿಕ ಭಾಷೆಗಳ ಗ್ರಾಫ್ ಇತ್ತೀಚಿನ ದಿನಗಳಲ್ಲಿ ಮೇಲಕ್ಕೆ ಹೋಗುವಂತೆ ಕಾಣುತ್ತಿದೆ. ಯುವ ಜನತೆ ತಮ್ಮ ಬೇರುಗಳತ್ತ ಮತ್ತೆ ಮುಖ ಮಾಡಿರುವಂತೆ ಭಾಸವಾಗುತ್ತಿದೆ..



ಇನ್ನು ಅರೆಭಾಷಿಗರ ಗಮನಕ್ಕೆ, ಪ್ರತಿ ವರ್ಷದ ಡಿಸಂಬರ್ 15 ರಂದು ಸಡಗರ ಸಂಭ್ರಮದ ವಿಶ್ವ ಅರೆಭಾಷೆ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಾದೇಶಿಕ ಭಾಷೆಗಳು ಬೆಳೆಯಲಿ, ಉಳಿಯಲಿ..

ಮೇಜರ್ |ಡಾ| ಕುಶ್ವಂತ್ ಕೋಳಿಬೈಲು

ಅನುಭವಿ ಮಕ್ಕಳ ತಜ್ಞರು ಹಾಗು ಬರಹಗಾರರು

error: Content is protected !!