fbpx

ವಿಶ್ವ ಆಹಾರ ದಿನಕ್ಕೆ ವಿಶೇಷ ಪೋನ್ ಇನ್ ಕಾರ್ಯಕ್ರಮ

ವಿಶ್ವ ಆಹಾರ ದಿನಾಚರಣೆ ಹಿನ್ನೆಲೆಯಲ್ಲಿ ಅ.೧೬ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ವಿಶೇಷ ಹಲೋ ಗೆಳೆಯರೇ ಫೋನ್‌ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದು ಮಧ್ಯಾಹ್ನ ೧೨ ರಿಂದ ೧ ಗಂಟೆ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಆಹಾರ ಸಂರಕ್ಷಣಾ ಅಭಿಯಾನದ ಪ್ರಮುಖರೂ ಆಗಿರುವ ನಿವೃತ್ತ ಉಪನ್ಯಾಸಕ ಹೆಚ್.ಕೆ. ತಿಲಗಾರ್ ಪಾಲ್ಗೊಳ್ಳಲಿದ್ದಾರೆ. ವಾಹಿನಿಯಲ್ಲಿ ನೀಡುವ ದೂರವಾಣಿ ಸಂಖ್ಯೆಗೆ ಆಸಕ್ತರು ಕರೆ ಮಾಡಬಹುದಾಗಿದೆ ಎಂದು ಆಹಾರ ಸಂರಕ್ಷಣಾ ಅಭಿಯಾನದ ಸಂಚಾಲಕ ಎನ್.ಕೆ. ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!