fbpx

ವಿಶ್ವ ಆನೆ ದಿನದಂದು “ಗಜರಾಜ” ಪ್ರತ್ಯಕ್ಷ

ವಿಶೇಷ ವರದಿ: ಗಿರಿಧರ್ ಕೊಂಪುಳೀರಾ


ಕೊಡಗು(ಆನೆಕಾಡು): ನಶಿಸುತ್ತಿರುವ ಕಾಡಾನೆಗಳ ಸಂತತಿ ಉಳಿವಿಗಾಗಿ ರಾಷ್ಟ್ರೀಯ ಆನೆಗಳ ಸಂರಕ್ಷಣಾ ಪ್ರಾಧಿಕಾರ (NECA) 2010ರಲ್ಲಿ ಭಾರತೀಯ ಸರ್ಕಾರ ಗಜರಾಜನನ್ನು ಪಾರಂಪರಿಕ ಪ್ರಾಣಿ ಎಂದು ಘೋಷಣೆ ಮಾಡಿ ಆಗಸ್ಟ್ 12 ರಂದುವಿಶ್ವ ಆನೆಗಳ ದಿನ ಇಂದು ಆಚರಿಸಲಾಗುತ್ತದೆ. ಕಾಡಾನೆ ಮತ್ತು ಮಾನವನ ಸಂಘರ್ಷ ನಡೆಯುತ್ತಲೇ ಇದೆ,ಅರಣ್ಯ ಇಲಾಖೆ ಕಾಡಾನೆಗಳ ಉಪಟಳ ತಡೆಯಲು ಹಲವು ಯೋಜನೆ ಜಾರಿ ಗೊಳಿಸಿದೆ.ಆದರ ಅವುಗಳ ಆನೆ ಪಥ(Elephant Corridor) ಒತ್ತುವರಿ ಮಾಡುವ ಮೂಲಕ ಕೃಷಿ ಜಮೀನು,ಕಾಂಕ್ರಿಟೀಕರಣ ,ಹೆದ್ದಾರಿ ,ರೈಲು ಮಾರ್ಗ,ಹೈಟೆಂಷನ್ ವಿದ್ಯುತ್ ಗಾಗಿ ಅರಣ್ಯ ನಾಶ.ಇಷ್ಟೆಲ್ಲಾ ಆಗುತ್ತಿದೆ.ಅವುಗಳ ಜಾಗವನ್ನೇ ಕಬಳಿಸಿರುವುದರಿಂದ ಓಹಾರ ಅರಸಿ ಕಾಡಿನಿಂದ ನಾಡಿನ ಕಾಫಿ ತೋಟಗಳಲ್ಲೇ ಬೀಡುಬಿಟ್ಟು ತನ್ನ ಕುಟುಂಬ ಬೆಳೆಸುತ್ತಿದೆ.

ಆನೆಕಾಡಿನ ರಸ್ತೆ ಬದಿಯ ಅರಣ್ಯದಲ್ಲಿ ಕಾಡಾನೆ ಬಂದಿದ್ದ ಚಿತ್ರ
ಪೊಟೋ ಕೃಪೆ: ಕೃಷ್ಣ, ಕಾವಲುಪಡೆ

ಇದೇ ಸಂಘರ್ಷಕ್ಕೂ ಕಾರಣವಾಗಿದೆ.ಕಾಡುಗಳ್ಳ ವೀರಪ್ಪನ್ ಬದುಕ್ಕಿದ್ದಾಗ ದಂತಕ್ಕಾಗಿ ಆನೆಗಳ ಮಾರಣ ಹೋಮ ಮಾಡಿ ದಂತಚೋರ ಅಂತಾನೇ ಕುಖ್ಯಾತಿ ಪಡೆದಿದ್ದ,ಈತನ ಆನೆ ದಂತ ದಾಹಕ್ಕೆ ದಕ್ಷಿಣ ಭಾರತದಲ್ಲಿ ಅದೆಷ್ಟು ಅಮಾಯಕ ಆನೆಗಳು ಮೃತಪಟ್ಟವೂ,ವೀರಪ್ಪನ್ ಅಂತ್ಯ ಬಳಿಕ ಕೆಲವೊಂದು ಮರಿ ವೀರಪ್ಪನ್ ಗಳೂ ಇಂದಿಗೂ ಇದ್ದಾರೆ…!!!
ಒಟ್ಟಿನಲ್ಲಿ ಆನೆ ದಿನದಂದು ಕಾಡಾನೆಯೊಂದು ತನ್ನದೇ ಅರಣ್ಯವಾದ “ಆನೆಕಾಡು” ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಕುಶಾಲನಗರ ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ದರ್ಶನ ನೀಡಿದ್ದಾನೆ.

error: Content is protected !!