ವಿಶ್ವನಾಥ್ ಗೆ ಬಿಗ್ ಬಾಸ್ ಗೆ ಆಹ್ವಾನ


ಕೊಡಗು: “ಹಳ್ಳಿ ಹಕ್ಕಿ”ಯನ್ನು ಗೂಡಿಗೆ ಹಾಕಲು ಬಿಗ್ ಬಾಸ್ ನಿರ್ಧಾರ ಮಾಡಿದಂತಿದೆ. ಹೌದು ಫೈರ್ ಬ್ರಾಂಡ್,ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅಡಗೂರು ವಿಶ್ವನಾಥ್ ರಿಗೆ ಫೆಬ್ರವರಿಯಿಂದ ಆರಂಭವಾಗಲಿರುವ ಕಿಚ್ಚ ಸುದೀಪ್ ಸಾರಥ್ಯದ 8ನೇ ಬಿಗ್ ಬಾಸ್ ಗೆ ಆಹ್ವಾನ ದೊರೆತಿದೆ.ಕಳೆದ ಬಾರಿಯೂ ಆಹ್ವಾನ ಬಂದಿದ್ದು ವೈಯುಕ್ತಿಕ ಸಮಸ್ಯೆ ಕಾರಣದಿಂದ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದ್ದು ಈ ಭಾರಿ ಮತ್ತೆ ಆಹ್ವಾನ ದೊರೆತಿದೆ.

ಮೂರು ತಿಂಗಳ ಕಾಲ ನಡೆಯುವ ಈ ಶೋದ ರೂಪು ರೇಶೆ ನೋಡಿ ನಿರ್ಧಾರ ಕೈಗೊಳ್ಳುವುದಾಗಿ ವಿಶ್ವನಾಥ್ ತಿಳಿಸಿದ್ದಾರೆ.ಈ ಬಾರಿಯ ಬಿಗ್ ಬಾಸ್ ತೀವ್ರ ಕುತೂಹಲ ಕೆಡಿಸಿದ್ದು. ದ್ರೋಣ್ ಪಾರತಾಪ್ ಸೇರಿದಂತೆ,ಬಿಟಿವಿ ರಾಧಾ ಹಿರೇಗೌಡರ್ ,ಜೊತೆ ಜೊತೆಯಲಿ ಧಾರವಾಹಿಯ ಡಾ.ವಿಶ್ಣುವರ್ಧನ್ ಅಳಿಯರಾದ ಅನಿರುದ್ದ್ ಸೇರಿದಂತೆ ಹಲವು ಮಂದಿಗೆ ಕರೆ ಹೋಗಿದು ಕೆಲವರ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ.

error: Content is protected !!