ವಿರಾಜಪೇಟೆ ಪ.ಪಂ ಚುನಾವಣೆಯಲ್ಲಿ ವಿಲಾಂಕ್ ಕುಟ್ಟಪ್ಪ ಜಯಭೇರಿ!

ಸುಜಾ ಕುಶಾಲಪ್ಪ ಅವರ ಪುತ್ರನ ಗೆಲುವಿನಿಂದ ಕಮಲ ಪಾಳಯದಲ್ಲಿ ಹರ್ಷ

ವೀರಾಜಪೇಟೆ ಪ.ಪಂ ಉಪ ಚುನಾವಣೆಯಲ್ಲಿ ಬಿಜಿಪಿಯ ವಿಲಾಂಕ್ ಕುಟ್ಟಪ್ಪ ಜಯಭೇರಿಯಾಗಿದ್ದಾರೆ.

ಬಿಜೆಪಿ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಸುಜಾ ಕುಶಾಲಪ್ಪ ಪುತ್ರ ವಿಲಾಂಕ್ ಕುಟ್ಟಪ್ಪ ಗೆಲವು ಸಾಧಿಸಿರುವುದು ಕಮಲ ಪಾಳಯದಲ್ಲಿ ಹರ್ಷ ಉಂಟು ಮಾಡಿದೆ.

ವಿರಾಜಪೇಟೆ ಪ.ಪಂ.ಉಪಾಧ್ಯಕ್ಷರಾಗಿದ್ದ ಹರ್ಷವರ್ಧನ್ ನಿಧನದಿಂದ ತೆರವಾಗಿದ್ದ ಮೀನು ಪೇಟೆ 13 ನೇ ವಾರ್ಡಿನಲ್ಲಿ ಬಿಜೆಪಿಯ ವಿಲಾಂಕ್ ಕುಟ್ಟಪ್ಪ ಒಟ್ಟು 238 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ನ ಮಾದಂಡ ತಿಮ್ಮಯ್ಯ 178 ಮತ ಗಳಿಸಲಷ್ಟೇ ಶಕ್ತರಾಗಿ ಪರಾಭವರಾಗಿದ್ದಾರೆ.

error: Content is protected !!