fbpx

ವಿರಾಜಪೇಟೆ ಪುರಸಭೆ ಪೀಠೋಪಕರಣ ಅವ್ಯವಹಾರ ಪ್ರಕರಣ: ಲೋಕಾಯುಕ್ತರಿಂದ ಒಂದು ವಾರ ಗಡುವು

ಪೀಠೋಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರದಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ವಿರಾಜಪೇಟೆಯ ಪುರಸಭೆಯ ಕಛೇರಿಯ ತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಮಡಿಕೇರಿಯಿಂದ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್ ಪವನ್ ಕುಮಾರ್, ಹೆಡ್ ಕಾನ್ಸ್ಟೇಬಲ್ ಲೋಕೇಶ್ ಮತ್ತು ಮಂಜುನಾಥ್ ನೇತೃತ್ವದ ತಂಡ ಕೆಲವು ವಿಚಾರಣೆ ಮತ್ತು ತನಿಖೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ತನಿಖೆಗಾಗಿ ಕೊಂಡೊಯ್ಯಲಾಗಿದೆ.

ಪ್ರಕರಣ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಮುಂದೆ ಪ್ರಶ್ನೆಗಳ ಮಳೆ ಸುರಿದ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಒಂದು ವಾರದ ಗಡುವು ಜೂತೆಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ.

error: Content is protected !!