ವಿರಾಜಪೇಟೆಯಲ್ಲಿ ಹೈ ಅಲರ್ಟ್

ಕೊಡಗು: ಮೇ 14 ರಿಂದ ಜಿಲ್ಲೆಯಲ್ಲಿ ಭಾರೀ ಗಾಳಿ ಸಮೇತ ಮಳೆ ಬೀಳುವ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿರುವ ಬೆನ್ನಲ್ಲೇ ಮಡಿಕೇರಿ ರೀತಿಯಲ್ಲಿ ಅಪಾಯದಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಮಲೆತಿರಿಕೆ,ಅರಸುನಗರ,ನೆಹರುನಗರ ಸೇರಿದಂತೆ ಇಳಿಜಾರಿನ ಪ್ರದೇಶದಲ್ಲಿ ವಾಸಿಸುವ ಮಂದಿ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿರಾಜಪೇಟೆ ಪಟ್ಟಣ ಪಂಚಾಯ್ತಿ ಆದೇಶಿಸಿದೆ.