ವಿಪಕ್ಷ ನಾಯಕ ಸಿದ್ದು ಕಾರಿನ ಮೇಲೆ ಮೂಟ್ಟೆ ಎಸೆತ ಪ್ರಕರಣ: ಕಿಡಿಗೇಡಿಗಳನ್ನು ಬಂಧಿಸುವಂತೆ ಕಾಂಗ್ರಸ್ ಪ್ರತಿಭಟನೆ



ಮಡಿಕೇರಿಯಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ರವರ ಕಾರಿಗೆ ಮೊಟ್ಟೆ ಎಸೆತ,ಬ್ಯಾನರ್ ಹರಿದಿರುವ ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷ 9 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿದ್ದು ಅವರ ಮೇಲೆ ಮಡಿಕೇರಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ಸಿನ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.


ಹೈಕೋರ್ಟ್ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ, ಎಂಎಲ್ಸಿ ವೀಣಾ ಅಚ್ಚಯ್ಯ, ಹಿರಿಯ ಮುಖಂಡ ಹಾಗು ಖ್ಯಾತ ವಕೀಲರಾದ ಚಂದ್ರಮೌಳಿ, ಟಿ.ಪಿ ರಮೇಶ್ ,ವಕ್ತಾರ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯ ವಿನಾಯಕ ದೇವಾಲಯದ ಆವರಣದಿಂದ ಎಸ್ಪಿ ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ಸರ್ಕಾರ ಮತ್ತು ನಿನ್ನೆಯ ಘಟನೆ ಖಂಡಿಸಿ ಘೋಷಣೆಯನ್ನು ಕೂಗಿದರು. ಕೆಲಕಾಲ ಕಚೇರಿ ಎದುರು ಧರಣಿಯನ್ನೂ ನಡೆಸಲಾಯಿತು. ಮುಂಜಾಗೃತಾ ಕ್ರಮವಾಗಿ ಸಾಕಷ್ಟು ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಈ ಸಂದರ್ಭಆಗಸ್ಟ್ 26 ರಂದು ನಡೆಯುವ ಎಸ್ಪಿ ಕಚೇರಿ ಮುತ್ತಿಗೆ ಯಶಸ್ವಿಯಾಗಿ ನಡೆಸುವಂತೆ ಕರೆ ನೀಡಲಾಯಿತು.