ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವೇಶಿಸಿದ್ದ ಬಸವೇಶ್ವರ ದೇವಾಲಯ ಶುದ್ಧೀಕರಣ ಮಾಡಲು ನಿರ್ಧಾರ

ಇತ್ತೀಚೆಗೆ ಕೊಡಗು ಜಿಲ್ಲೆಗೆ ಮಳೆ ಹಾನಿ ವೀಕ್ಷಣೆಗೆಂದು ಆಗಮಿಸಿದ್ದ ವೇಳೆ ಮಾಂಸ ಸೇವಿಸಿ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಬಸವೇಶ್ವರ ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ದೇವಾಲಯವನ್ನು ಶುದ್ದಗೊಳಿಸಲು ದೇವಾಲಯ ಸಮಿತಿ ನಿರ್ಧರಿಸಿದೆ.

ತನ್ನದೇ ಆದ ಇತಿಹಾಸ ಹೊಂದಿರುವ ಬಸವೇಶ್ವರ ದೇವಾಲಯಕ್ಕೆ ಅಪವಿತ್ರವಾಗಿ ಆಗಮಿಸುವಂತಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಾಲಯ ಪ್ರವೇಶ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿರುವುದರಿಂದ ಭಕ್ತಾಧಿಗಳಿಗೂ ಇರುಸುಮುರುಸು ಉಂಟಾಗುತ್ತಿದೆ.

ಹೀಗಾಗಿ ದೇವಾಲಯ ಶುಚಿಗೊಳಿಸಿ, ವಿಶೇಷ ಪೂಜೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವರಪ್ರಸಾದ್ ತಿಳಿಸಿದ್ದಾರೆ.

error: Content is protected !!