fbpx

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು

ಮಡಿಕೇರಿ : ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೊಬ್ಬ ಸಾವಿಗೀಡಾದ ದುರ್ಘಟನೆ ಮಡಿಕೇರಿಯ ದಾಸವಾಳ ರಸ್ತೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಕಾರ್ಮಿಕ ರಮೇಶ್‌ ಕದಿರ್‌ವೇಲ್‌ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಇಲ್ಲಿನ ಶ್ರೀ ವೀರಭದ್ರ ಮುನೀಶ್ವರ ದೇವಾಲಯದ ಪ್ರವೇಶ ದ್ವಾರಕ್ಕೆ ಬಣ್ಣ ಬಳಿಯುತ್ತಿದ್ದ ವೇಳೆ ನಡೆದಿದೆ. ಕಬ್ಬಿಣದ ಸಲಾಕೆಗೆ ವಿದ್ಯುತ್‌ ತ‌ಂತಿ ಸ್ಪರ್ಶಿಸಿದ್ದು, ರಮೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮಡಿಕೇರಿ ನಗರ ಠಾಣೆ ಪೊಲೀಸರು, ಸೆಸ್ಕ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

error: Content is protected !!