ವಿದ್ಯುತ್ ಬಿಲ್ಲು ಪಾವತಿಗೆ ಮನವಿ

ಮಡಿಕೇರಿ ಮೇ 26:-ಕೋವಿಡ್ ಹಾಗೂ ಲಾಕ್ಡೌನ್ ಸಮಸ್ಯೆ ಇದ್ದರೂ ಕೂಡ ವಿದ್ಯುತ್ ಇಲಾಖೆ ಗ್ರಾಹಕರಿಗೆ ಅಗತ್ಯ ವಿದ್ಯುಚ್ಥಕ್ತಿ ಪೂರೈಸಲು ನಿರಂತರ ಶ್ರಮವಹಿಸಿ, ಕಾರ್ಯನಿರ್ವಹಿಸುತ್ತಿದೆ.
ಯಾವುದೇ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದ್ದಲ್ಲಿ ಆರ್ಥಿಕವಾಗಿ ಸದೃಢವಾಗಬೇಕಿದೆ. ಆದರೆ ಸದ್ಯ ಲಾಕ್ಡೌನ್ ಸಮಸ್ಯೆಯಿಂದ ಗ್ರಾಹಕರು ವಿದ್ಯುತ್ ಬಿಲ್ಲು ಪಾವತಿಸಲು ಮುಂದೆ ಬರುತಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ, ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ಲು ಪಾವತಿಸುವಂತೆ ಸೆಸ್ಕ್ನ ಇಇ ಅಶೋಕ ಅವರು ಕೋರಿದ್ದಾರೆ.
ಗ್ರಾಹಕರು ತಮ್ಮ ವಿದ್ಯುತ್ ಬಿಲ್ಲುನ್ನು ನೆಟ್ ಬ್ಯಾಂಕಿಂಗ್, ಪೋನ್ ಪೇ, ಗೂಗಲ್ ಪೇ, ಅಮೆಜಾನ್ ಪೇ, ಏರಟೆಲ್ ಮನಿ, ಭಾರತ್ ಬಿಲ್ ಪೇ, ಜಿಯೋ ಮನಿ ಇತರೆ ಡಿಜಿಟಲ್ ಪೇಮೆಂಟ್ ಮೂಲಕ ವಿದ್ಯುತ್ ಬಿಲ್ಲು ಪಾವತಿಸಿ, ಇಲಾಖೆಯೊಂದಿಗೆ ಸಹಕರಿಸುವಂತೆ ಸೆಸ್ಕ್ ಇಇ ಕೋರಿದ್ದಾರೆ.