ವಿದ್ಯುತ್ ತಂತಿ ಸ್ಪರ್ಶದಿಂದ ಮಹಿಳೆ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಬೆಂಬಳೂರಿನಲ್ಲಿ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಗ್ರಾಮದ ಜಾನಕಿ(60) ಮೃತ ದುರ್ದೈವಿಯಾಗಿದ್ದು ಮನೆಯಲ್ಲಿ ಬಟ್ಡೆ ಒಣಗಲು ಹಾಕುವಾಗ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ್ದಾರೆ.
ವಿದ್ಯುತ್ ತಂತಿ ಜೋತುಬಿದ್ದಿದ್ದ ಪರಿಣಾಮ ಈ ನಡೆದ ಘಟನೆ ನಡೆದಿದ್ದು, ಜೊತೆಗೆ ಇದ್ದ ಇವರ ಅತ್ತೆಗೂ ವಿದ್ಯುತ್ ತಗುಲಿ ಗಂಭೀರ ಗಾಯಗಳಾಗಿದೆ. ದುರ್ಘಟನೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.