ವಿದ್ಯುತ್ ತಂತಿ ತಗುಲಿ ಸಲಗ ಸಾವು!

ಸೋಮವಾರಪೇಟೆ ತಾಲ್ಲೂಕು
ಅತ್ತೂರು ಮೀಸಲು ಅರಣ್ಯ ವಲಯದ ವ್ಯಾಪ್ತಿಯ ಶುಂಠಿ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಅಂದಾಜು 8 ವರ್ಷದ ಗಂಡಾನೆ ಸಾವನಪ್ಪಿರುವ ಘಟನೆ ನಡೆದಿದೆ.

ಹೊಸಕಾಡು ಎನ್ನುವಲ್ಲಿನ ಖಾಸಗಿ ಜಮೀನಿಗೆ ಅಳವಡಿಸಿದ ವಿದ್ಯುತ್ ತಂತಿಯಿಂದ ಈ ದುರ್ಘಟನೆ ಸಂಭವಿಸಿದ್ದು ಕಳೆದ 15 ದಿನದಲ್ಲಿ ನಾಲ್ಕನೇ ಕಾಡಾನೆ ಸಾವು ಇದಾಗಿದ್ದು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದು ಎರಡನೇ ಪ್ರಕರಣವಾಗಿದೆ. ಅತ್ತೂರು ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!