ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು!

ಕುಶಾಲನಗರ ತಾಲ್ಲೂಕಿನ ನೆಲ್ಯುದಿಕೇರಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಮೃತಪಟ್ಟ ಘಟನೆ ನಡೆದಿದೆ.

ಗ್ರಾಮದ ಕೋಣೀರಿರ ಪ್ರಕಾಶ್ ಹಾಗೂ ಸುಮನ್ ಚಂಗಪ್ಪ ಎಂಬುವವರಿಗೆ ಸೇರಿದ್ದ ಕಾಫಿ ತೋಟದ ಮೇಲೆ 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದ್ದು, ತಂತಿ ಮೇಲೆ ಮರದ ಕೊಂಬೆ ತಗುಲಿ ಕೆಳಗೆ ಬಾಗಿತ್ತು ಎನ್ನಲಾಗಿದೆ, ಇದೇ ಸಂದರ್ಭ ಈ ಭಾಗದಲ್ಲಿ ಹಾದುಹೋಗುತ್ತಿದ್ದ ಕಾಡಾನೆಗಳಿಗೆ ವಿದ್ಯುತ್ ಸ್ಪರ್ಷಿಸಿದೆ. ವಿದ್ಯುತ್ ತೀವ್ರತೆಗೆ ಒಂದು ಗಂಡಾನೆ ಮತ್ತೊಂದು ಹೆಣ್ಣಾನೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.