fbpx

ವಿದ್ಯುತ್ ಚಿತಾಗಾರ ನಿರ್ಮಿಸಲಾಗುವುದು: ಶಾಸಕ ಅಪ್ಪಚ್ಚು ರಂಜನ್ ಭರವಸೆ

ಮಡಿಕೇರಿ ಆ.20:-ಮಡಿಕೇರಿ ನಗರದಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಒಂದು ವರ್ಷದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುವುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.  

 ನಗರದ ಮಲ್ಲಿಕಾರ್ಜುನ ನಗರ ಬಳಿ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು  ಮಾತನಾಡಿದರು.

 14 ಮತ್ತು 15 ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗೆಯೇ ಚೈನ್‍ಗೇಟ್ ಬಳಿಯಲ್ಲಿಯು ಸಹ ಸ್ಮಶಾನ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು. 

ಕೋವಿಡ್ 19 ಹಿನ್ನೆಲೆ ಸ್ಮಶಾನವು ಸಹಾ ಅತೀ ಮುಖ್ಯವಾಗಿದೆ. ಆ ದಿಸೆಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುವುದು ಎಂದು ಶಾಸಕರು ನುಡಿದರು. 

 ನಗರಸಭಾ ಸದಸ್ಯರಾದ ಕಲಾವತಿ, ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಸಬೀತಾ, ಪೌರಾಯುಕ್ತರಾದ ರಾಮ್‍ದಾಸ್, ಕಿರಿಯ ಎಂಜಿನಿಯರ್ ಶಮಂತ್ ಕುಮಾರ್, ಪ್ರಮುಖರಾದ ಭರತ್, ಪ್ರವೀಣ್ ಇತರರು ಇದ್ದರು.

error: Content is protected !!