fbpx

ವಿದ್ಯುತ್ ಇಲಾಖಾ ನಿರ್ಲಕ್ಷ್ಯ: ಕತ್ತಲೆಯಲ್ಲಿ ಮುಳುಗಿದ ನರಿಯಂದಡ ಪಂಚಾಯಿತಿಯ ಗ್ರಾಮಗಳು

ಇದರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಪವನ್ ತೊಟಂಬೈಲ್

ಚೆಯ್ಯಂಡಾಣೆ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆಯ ನಿರ್ಲಕ್ಷ್ಯದಿಂದ ಕಳೆದ ತಿಂಗಳಿನಿಂದ ನರಿಯಂದಡ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ, ಚೆಯ್ಯಾಂಡಾಣೆ, ನರಿಯಂದಡ ,ಕೊಕೇರಿ , ಚೇಲಾವಾರ ಗ್ರಾಮಗಳು ಕಗ್ಗತ್ತಲೆಯಲ್ಲಿ ಮುಳುಗಿವೆ. ಬೆಳಗ್ಗಿನಿಂದ ಸಂಜೆಯ ತನಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾಮಗಾರಿ ನಡೆಯುತ್ತಿದೆ ಎನ್ನುವ ಉತ್ತರ ಬಂದರೆ ಸಂಜೆಯ ವೇಳೆ ಸಂಪರ್ಕ ಟ್ರಿಪ್ ಆಗುತ್ತಿದೆ .

ಚಾರ್ಜ್ ನಿಲ್ಲುತ್ತಿಲ್ಲ ಎನ್ನುವ ಉತ್ತರ ಹಲವು ದಿನಗಳಿಂದ ಸಂಬಂಧ ಪಟ್ಟ ಇಲಾಖೆಯಿಂದ ಬರುತ್ತಿದ್ದು, ಆನ್ಲೈನ್ ತರಗತಿ ಹಾಗೂ ಮನೆಯಿಂದ ಕೆಲಸ ಮಾಡುತ್ತಿರುವ ಅದೆಷ್ಟೋ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದರೂ ಇಲಾಖೆ ಇನ್ನೂ ಎಚ್ಚರ ಗೊಳ್ಳಲೇ ಇಲ್ಲ.ಬೇಸಿಗೆಯ ಕಾಲದಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಇಷ್ಟಕ್ಕೆಲ್ಲ ಕಾರಣವಾಗಿದೆ ಹೊರತು ಬೇರೇನೂ ಅಲ್ಲ.ಕೇವಲ ಮೇಲ್ನೋಟಕ್ಕೆ ಸಂಪರ್ಕ ಕಡಿತ ಗೊಂಡ ಸ್ಥಳ ವೀಕ್ಷಿಸಿ ತೆರಳುವರೆ ಹೊರತು ಲೈನ್ ಸರಿ ಇದೆಯೇ ಎಂದು ನೋಡದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋಗುವರಷ್ಟೇ. ಲೈನ್ ಮ್ಯಾನ್ ಅವರು ಇದ್ದಾರೆ ಇಲ್ಲವೋ ಎಂಬ ಅನುಮಾನ ಇದೆ. ಹಗಲು ರಾತ್ರಿ ಎನ್ನದೇ ಒಂದು ಕಡೆ ಅನೆಯ ಉಪಟಳ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಈ ಗ್ರಾಮದ ಮಾಗ೯ದಲ್ಲಿ ಸಂಚಾರಿಸಲು ಪರದಾಡುವ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಈ ವಿಚಾರವಾಗಿ ಮಾನ್ಯ ಜಿಲ್ಲಾಧಿಕಾರಿಯವರು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಗತಿಯಲ್ಲಿ ದುರಸ್ತಿ ಮಾಡಲು ಸೂಚನೆಯನ್ನು ನೀಡಬೇಕು ಎಂದು ಮನವಿಯನ್ನು ಮಾಡುತ್ತೇನೆ ಎಂದರು .ಒಂದು ವೇಳೆ ಪ್ರಯೋಜನ ಕಾಣಲಿಲ್ಲ , ಎಂದರೆ ಸಂಬಂಧ ಪಟ್ಟ ಗ್ರಾಮದ ಸಾರ್ವಜನಿಕರು ಎಚ್ಚೆತು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಉಗ್ರ ಹೋರಾಟ ನಡೆಸಲು ಸನ್ನದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇನೆ ಎಂದು ಕೊಡಗು ಜಿಲ್ಲಾ ಬಿಜೆಪಿ ಯುವ ಮೋಚ೯ ಉಪಾಧ್ಯಕ್ಷರಾದ ಪವನ್ ತೊಟಂಬೈಲ್ ಸುದ್ದಿ ಸಂತೆಗೆ ತಿಳಿಸಿದರು.

error: Content is protected !!