fbpx

ವಿದ್ಯುತ್ ಅವಘಡ

ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರ ಸಜೀವ ದಹನಗೊಂಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಸಜೀವವಾಗಿ ದಹನಗೊಂಡ ಬೈಕ್ ಸವಾರನನ್ನು ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಎಂದು ಗುರುತಿಸಲಾಗಿದೆ. ಈತ ‌ ಬಳ್ಪದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಮಂಗಳವಾರ ಮುಂಜಾನೆ ಮುಂಜಾನೆ ತಮ್ಮ ಮನೆಗೆ ತೆರಳುತ್ತಿದ್ದ. ಈ ವೇಳೆ ಮಳೆ ಹಾಗೂ ಗಾಳಿಯಿಂದಾಗಿ ನಿಂತಿಕಲ್ಲು ಸಮೀಪ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಬೈಕ್ ಗೆ ಸ್ಪರ್ಶಿಸಿದೆ. ಪರಿಣಾಮ ಬೈಕ್ ಸವಾರ ಬೆಂಕಿಗೆ ಆಹುತಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!