ವಿದ್ಯಾರ್ಥಿ ಹುಟ್ಟೂರಿಗೆ ವಾಪಸ್ಸ್

ಯುದ್ದ ಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ ಕೊಡಗು ಮೂಲದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಕುಶಾಲನಗರ ಮೂಲದ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್ ಅವರ ಪುತ್ರ ಚಂದನ್ ಗೌಡ ಮತ್ತು ಲಿಖಿತ್ ವೈದ್ಯಕೀಯ ವ್ಯಾಸಂಗ ಮಾಡಿಕೊಂಡಿದ್ದು ಕಳೆದ ಒಂದು ವಾರದಿಂದ ಬಂಕರ್ ನಲ್ಲಿ ಸಹಪಾಟಿಗಳೂಂದಿಗೆ ಕಷ್ಟದ ದಿನಗಳನ್ನು ಕಳೆದಿದ್ದು, ಆಪರೇಷನ್ ಗಂಗಾ ವಿಶೇಷ ವಿಮಾನದ ಕಾರ್ಯಾಚರಣೆ ಮೂಲಕ ದೆಹಲಿ ಮೂಲಕ ಕುಶಾಲನಗರಕ್ಕೆ ವಾಪಸ್ಸಾಗಿದ್ದಾರೆ.