ವಿದ್ಯಾರ್ಥಿಗಳಿಗೆ ಪವರ್ ಕಟ್ ಸಮಸ್ಯೆ!

ಕುಶಾಲನಗರ ತಾಲ್ಲೂಕಿನ ನೆಲ್ಯುದಿಕೇರಿ ವ್ಯಪ್ತಿಯಲ್ಲಿ ಪವರ್ ಕಟ್ ನದೇ ಭಾರೀ ಸಮಸ್ಯೆ ಉಂಟಾಗಿದ್ದು, ಪರೀಕ್ಷಾ ತಯಾರಿಯಲ್ಲಿ ಇರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಳೆದ ಕೆಲವು ದಿನಗಳಿಂದ ಕತ್ತಲಿರುವಾಗಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆ ಸೆಸ್ಕ್ ಮಾಡುತ್ತಿದ್ದು, ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆಗಳು ದಿನನಿತ್ಯ ನಡೆಯುತ್ತಲೇ ಇದೆ. ನಿರಂತರ ವಿದ್ಯುತ್ ಒದಗಿಸಿ, ಕೊಡಗಿನ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ನೆರವಾಗುವಂತೆ ಕೋರಿದ್ದಾರೆ.