fbpx

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಪರಿಕರಗಳ ವಿತರಣೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 65 ವಿದ್ಯಾರ್ಥಿಗಳಿಗೆ ದಾನಿಗಳಾದ ಯೂತ್ ಜಿಲ್ಲಾಧ್ಯಕ್ಷರು ಮಿಥುನ್ ಗೌಡ ಉಚಿತ ಪುಸ್ತಕಗಳು ಮತ್ತು ಪರಿಕರಗಳು ಇಂದು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಿಥುನ್ ಗೌಡ ರವರು ಮಾತನಾಡಿ ಕನ್ನಡ ಶಾಲೆಯ ಉಳಿವಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ತುಂಬ ಅತ್ಯಗತ್ಯ ಹೀಗೆ ವಿದ್ಯಾರ್ಥಿಗಳಿಗೆ ಹಿತ ನುಡಿ ನುಡಿದರು ಇದೇ ಸಂದರ್ಭದಲ್ಲಿ ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರ ವತಿಯಿಂದ ಪುಸ್ತಕ ದಾನಿಗಳಾದ ಮಿಥುನ್ ಗೌಡ ಇವರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ದಾನಿಗಳಾದ ಯೂತ್ ಜಿಲ್ಲಾಧ್ಯಕ್ಷರಾದ ಮಿಥುನ್ ಗೌಡ ಹಾಗೂ ಸೋಮವಾರಪೇಟೆ ಬ್ಲಾಕ್ ಯುವ ನಾಯಕರಾದ ಕಿರಣ್ ಹಾಗೂ ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ
ಡಿ .ಕೆ ಪ್ರಸನ್ನ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ತಾಲ್ಲೂಕು ಕರವೇ ಕಾರ್ಯದರ್ಶಿಗಳಾದ ರಾಮನಹಳ್ಳಿ ಪ್ರವೀಣ್ ಹಾಗೂ ನಿಡ್ತ ಗ್ರಾಮ ಪಂಚಾಯತಿ ಸದಸ್ಯರಾದ ಮನು ಹಾಗೂ ಕರವೇ ರಾಮನಹಳ್ಳಿ ಘಟಕದ ಅಧ್ಯಕ್ಷರಾದ ಹರೀಶ್ ಹಾಗೂ ರಾಜಣ್ಣ ಹಾಗೂ ಮಂಜು ಹಾಗೂ ರಾಣಿ ಮತ್ತು ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!