ವಿಜೃಂಭಣೆಯಿಂದ ನಡೆದ ರಥೋತ್ಸವ

ಕುಶಾಲನಗರ ತಾಲ್ಲೂಕಿನ ಶೀರಂಗಾಲ ಗ್ರಾಮದಲ್ಲಿ ಉಮಾಮಹೇಶ್ವರಸ್ವಾಮಿಯ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ವಾರ್ಷಿಕ ರಥೋತ್ಸವದ ಸಂದರ್ಭ ನೂರಾರು ಮಂದಿ ಭಕ್ತರು ಭಾಗವಹಿಸಿದ್ದು, ತೇರನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ರಥಯಾತ್ರೆ ಉದ್ದಕ್ಕೂ ಈಡುಗಾಯಿ ಒಡೆದು,ದೇವರಿಗೆ ಜೊನ್ನೆ ಎಸೆದು ಭಕ್ತಿ ಮೆರೆದರು.
ಹೊಳೆಹುಂಡಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಈ ರಥೋತ್ಸವ ಕೊಡಗಿನ ಉತ್ತರ ಭಾಗದ ಮುಖ್ಯ ಜಾತ್ರೆಯಾಗಿದೆ.