fbpx

ವಿಜಯ ದಶಮಿ ಪ್ರಯುಕ್ತ ದೇವಿಯ ಮೆರವಣಿಗೆ

ವಿಜಯ ದಶಮಿ ಹಬ್ಬದ ಪ್ರಯುಕ್ತ ನರಸಾಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮೆರವಣಿಗೆ ನೆರೆವೇರಿತು.

ನರಸಾಪುರ :- ಗ್ರಾಮದಲ್ಲಿ ದಸರಾ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಶ್ರೀ ರೇಣುಕಾ ಯಲ್ಲಮ್ಮ ದೇವಿ ಹಾಗೂ ಶ್ರೀ ಕಾಟೇರಮ್ಮ ದೇವಿಯ ಉತ್ಸವವನ್ನು ವಿಜೃಂಭಣೆ ಯಿಂದ ನೆರೆವೇರಿಸಲಾಯಿತು.

ಶ್ರೀ ರೇಣುಕಾ ಯಲ್ಲಮ್ಮ ದೇವಿ ಮತ್ತು ಶ್ರೀ ಕಾಟೇರಮ್ಮ ದೇವಿಗೆ ನವರಾತ್ರಿಯ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜೆಯ ಜೊತೆಗೆ ಪ್ರಸಾದವಿನಿಯೋಗ ನೆರೆವೇರಿಸಲಾಯಿತು.

ನರಸಾಪುರ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮುನಿಯಪ್ಪ ಮತ್ತು ನಾಗಮ್ಮ ರವರ ಮಕ್ಕಳು ಅಳಿಯಂದರಿಂದ ನವರಾತ್ರಿಯ ಒಂಬತ್ತನೇ ದಿನದ ವಿಶೇಷ ಪೂಜೆ ಮತ್ತು ದೇವರ ಉತ್ಸವವನ್ನು ನೆರೆವೇರಿಸಲಾಯಿತು.

ವಿಶೇಷವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ನವರಾತ್ರಿಯ ಕಡೇ ದಿನದ ಪ್ರಯುಕ್ತ ದುರ್ಗಾ ದೇವಿಯ ಅಲಂಕಾರ ಮಾಡಲಾಗಿದ್ದು, ಕಂಗೋಳ್ಳಿಸುತ್ತಿತ್ತು.

ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಮೆರವಣಿಗೆ ಯನ್ನು ನರಸಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಈ ಮೆರವಣಿಗೆ ಸಂದರ್ಭದಲ್ಲಿ ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಕ್ತಧೀಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಮೆರವಣಿಗೆ ಸಂದರ್ಭದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಭಕ್ತಧೀಗಳು ಪೂಜೆ ಸಲ್ಲಿಸಿ ಆರತಿ ಬೆಳಗಿ ನಮಸ್ಕರಿಸಿದರು.

ಈ ಸಂದರ್ಭದಲ್ಲಿ ಮುನಿಯಪ್ಪ, ನಾಗಮ್ಮ, ಆನಂದ್, ಹನುಮಪ್ಪ, ನರಸಾಪುರ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ ಇ ಬಿ ಚಂದ್ರು, ವಿನೋದ್, ಪೂಜಾರಿ ಹನುಮಂತ, ಹಾಗೂ ಮುನಿಯಪ್ಪ ಮತ್ತು ನಾಗಮ್ಮ ಕುಟುಂಬ ವರ್ಗದವರು ಮತ್ತು ನರಸಾಪುರ ಗ್ರಾಮಸ್ಥರು ಹಾಗೂ ಭಕ್ತಧೀಗಳು ಭಾಗವಹಿಸಿದ್ದರು

error: Content is protected !!