ವಾಹನ ಸವಾರರು ಜೋಪಾನ ಹೆದ್ದಾರಿಯಲ್ಲಿ ಆಯಿಲ್ ಸೋರಿಕೆ!

ಕೊಯನಡುವಿನಿಂದ ಮಡಿಕೇರಿ ವರೆಗೆ ತೆರಳುವ ಮಾರ್ಗ ಮಧ್ಯೆ ಭಾರಿ ಪ್ರಮಾಣದ ಆಯಿಲ್ ಸೋರಿಕೆ ಉಂಟಾಗಿದ್ದು, ನಿರಂತರ ಅಪಘಾತ ನಡೆಯುತ್ತಿದೆ.

ದಟ್ಟ ಮಳೆ, ಬಿಟ್ಟು ಬಿಡದ ತುಂತುರು ಮಳೆ ನಡುವೆ ತೆರಳುವ ವಾಹನಗಳು ಅಪಾಯದ ಮುನ್ಸೂಚನೆ ಅರಿಯದೆ ಅಪಘಾತಕ್ಕೆ ಈಡಾಗುತ್ತಿರುವುದಕ್ಕೆ ಜೋಡುಪಾಲದಿಂದ ಮದೆನಾಡುವರೆಗೆ ವಾಹನಗಳು ಪಲ್ಟಿ ಹೊಡೆದು ಬಿದ್ದಿರುವುದು ಸಾಕ್ಷಿಯಾಗಿದೆ.

ರಸ್ತೆಯಲ್ಲಿ ಭಾರಿ ಪ್ರಮಾಣದ ತೈಲ ಸೋರಿಕೆಯಾಗಿದ್ದು ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಲು ವಾಹನ ಚಾಲಕರೇ ಸಾಮಾಜಿಕ ಜಾಲಗಳಲ್ಲಿ ಮಾಹಿತಿ ಹಂಚುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಇಂದು ಬೆಳಗ್ಗೆ ಸುಮಾರು ವಾಹನಗಳು ಕಾರು ಹಾಗೂ ಬೈಕುಗಳಾಗಿವೆ
ಎಚ್ಚರಿಕೆಯಿಂದಿರಿ… ನಿಧಾನವಾಗಿ ಚಲಾಯಿಸಿ.

error: Content is protected !!