ವಾಹನಗಳಿಲ್ಲದೆ ಕಾಲ್ನಡಿಗೆಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಜನರ ಪರದಾಟ!

ಕೊಡಗು: ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಜನರು ನಗರಗಳಿಗೆ ಬರುವುದನ್ನು ಅದಷ್ಟು ತಪ್ಪಿಸಿ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲೆಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬ್ಯಾರಿಕೇಡ್ ಹಾಕಿ ರಸ್ತೆಗಳಿಗೆ ಅಡ್ಡಲಾಗಿ ಪೊಲೀಸರು ನಿಯೀಜನೆ ಆಗಿದ್ದು, ಎಲ್ಲೆಡೆ ಖಾಕಿ ಸರ್ಪಗಾವಲು ಕಂಡು ಬರುತ್ತಿದೆ. ವಾಹನಗಳನ್ನು ನಿಲುಗಡೆಯ ಜಾಗದಲ್ಲಿ ನಿಲ್ಲಿಸಿ, ಪೇಟೆಗೆ ನಡೆದುಕೊಂಡು ಹೋಗಿ ಅಗತ್ಯ ವಸ್ತುಗಳನ್ನು ಕೊಂಡು ತರುವ ಅನಿವಾರ್ಯತೆ ಎದುರಾಗಿರುವುದರಿಂದ ಜನ ಪರದಾಡುವ ಸ್ಥಿತಿ ಕಂಡು ಬಂದಿದೆ.