ವಾವ ಸುರೇಶ್ ಅವರನ್ನು ಭೇಟಿ ಮಾಡಿದ ಸ್ನೇಕ್ಸ್ ಸುರೇಶ್ ಹಾಗೂ ಅವರ ತಂಡ

ಕೇರಳದ ತಿರುವನಂತಪುರಂ ನಲ್ಲಿ ವಾಸವಿರುವ ವಾವ ಸುರೇಶ್ ಅವರನ್ನು ಕೊಡಗಿನ ಸಿದ್ದಾಪುರದ ಸ್ನೇಕ್ ಸುರೇಶ, ಸ್ನೇಕ್ ನವೀನ್, ಸ್ನೇಕ್ ನೌಫಾಲ್ ಅವರುಗಳು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಕೆಲವು ದಿನಗಳ ಹಿಂದೆ ವಾವ ಸುರೇಶ್ ಅವರು ಹಾವನ್ನು ರಕ್ಷಿಸುವ ಸಮಯದಲ್ಲಿ ಹಾವು ಕಡಿದು ಆಸ್ಪತ್ರೆ ಸೇರಿದ್ದರು. ನಿನ್ನೆ ದಿನ ಕೊಡಗಿನಿಂದ ಸ್ನೇಕ್ ಸುರೇಶ್ ಅವರ ತಂಡ ಕೇರಳಕ್ಕೆ ತೆರಳಿ ವಾವ ಸುರೇಶ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಶಾಲ್ ಹೊದಿಸಿ ಸನ್ಮಾನ ಮಾಡಲಾಯಿತು. ಅವರು ಕೂಡ ಕೊಡಗಿನಿಂದ ಹೋದ ಮೂರು ಜನರಿಗೂ ಶಾಲ್ ಹೊಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು