ವಲಸೆ ಕಾರ್ಮಿಕರಿಗೆ ಸ್ಪಂದಿಸುವಲ್ಲಿ ಕಾರ್ಮಿಕ ಇಲಾಖೆ ಕ್ರಮ

ಕೊಡಗು: ಕಾರ್ಮಿಕರ ಕುಂದುಕೊರತೆ ಆಲಿಸುವಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದು, ಕಾರ್ಮಿಕರು ದುಡಿಯುತ್ತಿರುವ ಕಡೆಗಳಲ್ಲಿ ಮಾಲೀಕ/ ಗುತ್ತಿಗೆದಾರರು ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ ,
ಕಾರ್ಮಿಕರಿಗೆ ವಸತಿ ಸೌಕರ್ಯ, ಆಹಾರ ಪೂರೈಕೆ, ಆರೋಗ್ಯ ತಾಪಾಸಣೆ, ಹೀಗೆ ಹಲವು ರೀತಿಯ ಸವಲತ್ತು ಕಲ್ಪಿಸಿರುವ ಬಗ್ಗೆ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಮಿಕರ ಕುಂದುಕೊರತೆ ಆಲಿಸಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನಹರಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಇದೇ ಸಂದರ್ಭ ನಗರದ ಬಳಿ ಇರುವ ಕ್ಲಬ್ ಮಹಿಂದ್ರಾ ರೆಸಾರ್ಟ್ ವತಿಯಿಂದ ಕಾನ್ವೆಂಟ್ ಜಂಕ್ಷನ್ ಹತ್ತಿರದ ಶೆಡಗಳಲ್ಲಿರುವ ವಲಸೆ ಕಾರ್ಮಿಕರಿಗೆ, ಹೊಸ ಖಾಸಗಿ ಬಸ್ ನಿಲ್ದಾಣದ ಹತ್ತಿರದ ಶೆಡಗಳಲ್ಲಿರುವ ವಲಸೆ ಕಾರ್ಮಿಕರಿಗೆ, ಆರ್.ಟಿ.ಒ ಕಚೇರಿಯ ಹತ್ತಿರದ ನಿರಾಶ್ರಿತರ ವಸತಿ ಗೃಹಗಳ ಕಾಮಗಾರಿ ಹತ್ತಿರವಿರುವ ವಲಸೆ ಕಾರ್ಮಿಕರಿಗೆ ಹಾಗೂ ಸ್ಟೋನ್ಹಿಲ್ ಹತ್ತಿರದ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಹತ್ತಿರವಿರುವ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ನ್ನು ವಿತರಿಸಲಾಗಿದೆ.ಕಾಫಿ ತೋಟ, ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಗುತ್ತಿಗೆದಾರರಿಂದ ಮಾಹಿತಿ ಪಡೆದು ಪರಿಶೀಲಿಸಿ ನಂತರ ಕಾರ್ಮಿಕರ ಜೊತೆಗೆ ಸುರಕ್ಷತಾ ಕ್ರಮಗಳನ್ನು ಒದಗಿಸಿರುವ ಕುರಿತು ವಿಚಾರಣೆ ಹಾಗೂ ಕಾರ್ಮಿಕರಿಗೆ ಕೋವಿಡ್-19ರ 2ನೇ ಅಲೆಯ ಕುರಿತು ತಿಳುವಳಿಕೆ ನೀಡಲು ಕ್ರಮ
ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಕೆಲಸ ಮಾಡುವಂತೆ ತಿಳಿಸಲಾಗುತ್ತಿದೆ ಹಾಗೂ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಮತ್ತು ಜಿಲ್ಲಾಧಿಕಾರಿ ಅವರು ಆಗಿಂದಾಗ್ಗೆ ಹೊರಡಿಸುವ ಕೋವಿಡ್-19 ಕ್ಕೆ ಸಂಬಂಧಿಸಿದ ಆದೇಶ, ಸುತ್ತೋಲೆ ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಯಿತು ಹಾಗೂ ಕಾರ್ಮಿಕರ ಕುಂದುಕೊರತೆಗಳನ್ನು ವಿಚಾರಿಸಲಾಯಿತು.
ಕೋವಿಡ್ 19 ರ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಇಲಾಖೆಯು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು 24*7 ಸಹಾಯವಾಣಿ 155214 ನ್ನು ಸ್ಥಾಪಿಸಿಲಾಗಿದೆ.
ಈ ಸಂದರ್ಭದಲ್ಲಿ ಕರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಕಾರ್ಮಿಕ ಇಲಾಖೆಯು ಕಾರ್ಮಿಕರ ಬೆನ್ನುಲುಬಾಗಿ ಸದಾ ಕಾರ್ಮಿಕರ ಸೇವೆಗೆ ಸಿದ್ಧವಿರುತ್ತದೆ. ಕಾರ್ಮಿಕರು ಕೋವಿಡ್ 19 ಮತ್ತು ಇತರೆ ಯಾವುದೇ ಸಂಬಂಧಿತ ಸಮಸ್ಯೆಗಳಿಗಾಗಿ 155214 ಸಹಯವಾಣಿ ಸಂಪರ್ಕಿಸಬಹುದಾಗಿದೆ.