ವರ್ಷಾಂತ್ಯಕ್ಕೆ ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿಯಮ:ಟಿಬೇಟ್ ಕ್ಯಾಂಪಿಗೆ ಇನ್ನು ಹತ್ತು ದಿನಗಳು ನೋ ಎಂಟ್ರಿ

ಕೊಡಗು: ಕೋವಿಡ್ ಬಳಿಕ ನಿದಾನವಾಗಿ ಉದ್ಯಮಗಳು ಆರಂಭವಾಗುತ್ತಿದ್ದು,ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.ವರ್ಷಾಂತ್ಯದಲ್ಲಿ ಪ್ರವಾಸಿ ತಾಣಗಳು,ರೆಸಾರ್ಟ್,ಹೋಂಸ್ಟೇ,ಹೊಟೇಲ್,ರೆಸ್ಟಾರೆಂಟ್ ಗಳಲ್ಲಿ ಪ್ರವಾಸಿಗರ ಹರಿವು ಹೆಚ್ಚಾಗುವ ಕಾರಣ ಎಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ವಿಫಲವಾದರೆ,ರೆಸಾರ್ಟ್ ಹೋಟೇಲ್ ಹೋಂಸ್ಟೇ ಮಾಲೀಕರೇ ನೇರ ಹೊಣೆಯಾಗಲಿದ್ದಾರೆ.ಈಗಾಗಲೇ ಅಲ್ಲಲ್ಲಿ ನಾಮಫಲಕ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು ಪ್ರವಾಸಿ ತಾಣದಲ್ಲಿ ನಿಯಮ ಉಲ್ಲಂಘಿಸಿದರೆ ದಂಡ ಬೀಳುವುದು ಖಚಿತ.

ಬೈಲುಕುಪ್ಪೆ ಬಂದ್: ಕುಶಾಲನಗರ ಹೊರವಲಯದ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲುಕುಪ್ಪೆ ಟಿಬೇಟ್ ನಿರಾಶ್ರಿತರ ಕ್ಯಾಂಪಿನ ಗೋಲ್ಡನ್ ಟೆಂಪಲ್ ಪ್ರವೇಶಕ್ಕೆ ಇನ್ನು ಹತ್ತು ದಿನ ನಿರ್ಭಂದ ಹೇರಲಾಗಿದೆ.ಇದೇ ತಿಂಗಳ 26 ವರೆಗೆ ಸ್ಯಾನಿಟೈಸಿಂಗ್ ಮತ್ತಿತ್ತರ ಕೆಲಸ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ಕ್ಯಾಂಪಿನ ಆಡಳಿತ ಮಂಡಳಿ ನಿರ್ಭಂಧ ಹೇರಿ ಆದೇಶ ಹೊರಡಿಸಿದೆ‌

error: Content is protected !!