ವರುಣನ ಕೃಪೆಗೆ ದೇವರ ಮೊರೆ ಹೋದ ಕೊರವೇ

ಜಿಲ್ಲೆಯಲ್ಲಿ ಇನ್ನೂ ಮಳೆಯಾಗದ ಕಾರಣ ಅಧ್ಯಕ್ಷರಾದ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಕೊಡಗು ರಕ್ಷಣಾ ವೇದಿಕೆಯ ಸದಸ್ಯರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಿತು.

ಈ ವೇಳೆ ಮಾತನಾಡಿದ ಪವನ್ ಪೆಮ್ಮಯ್ಯ,’ ಪ್ರತಿ ವರ್ಷವೂ ಜಿಲ್ಲೆಯಲ್ಲಿ ವರಣನ ಆಗಮನವಾಗಿ ರೈತರ ಹಾಗು ಕೃಷಿಕರ ಹರ್ಷಗೆ ಕಾರಣವಾಗುತ್ತಿತ್ತು. ಆದರೆ ಈ ವರ್ಷ ಮಳೆ ವಿಳಂಬವಾಗುತ್ತಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಮಳೆಗಾಗಿ ಕೊರವೇ ಜಿಲ್ಲೆಯ ಎಲ್ಲಾ ದೇವಾಲಯ, ಮಸೀದಿ ಹಾಗು ಚಚ್೯ಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದೆ’ ಎಂದರು.

error: Content is protected !!