ವನ್ಯಜೀವಿ ರಕ್ಷಣೆ ಅಭಿಯಾನಕ್ಕೆ ಶಾಸಕರಿಂದ ಚಾಲನೆ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಒಂದು ವಾರಗಳ ವನ್ಯಜೀವಿ ರಕ್ಷಣೆ ಅಭಿಯಾನ ನಡೆಯಲಿದೆ.

ಹುಲಿಗಳ ರಕ್ಷಣೆಗೆ ಪಣ ತೊಟ್ಟು ಅರಣ್ಯ ಇಲಾಖಾ ವಾಹನಗಳಿಂದ ಜಾಥಾ ನಡೆಸಲಿದ್ದು, ನಾಗರ ಹೊಳೆ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಚಾಲನೆ ನೀಡಲಾಯಿತು. ಈ ವನ್ಯ ಜೀವಿ ರಕ್ಷಣೆ ಅಭಿಯಾನಕ್ಕೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ,ಅರಣ್ಯ ಇಲಾಖೆಯ ವಿವಿಧ ವಲಯ ಅಧಿಕಾರಿಗಳು ಭಾಗಿಯಾದರು. ಆದಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದ್ದು, ನೆರೆದವರ ಗಮನ ಸೆಳೆಯಿತು.