ವನ್ಯಜೀವಿಯಿಂದ ಸಾಕುನಾಯಿ ಮೃತಪಟ್ಟರೆ ಪರಿಹಾರಕ್ಕೆ ರೈತ ಸಂಘ ಆಗ್ರಹ

ದಕ್ಷಿಣಕೊಡಗಿನ ಕಿರುಗೂರು ವ್ಯಾಪ್ತಿಯಲ್ಲಿ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಿದ್ದು,ಸಾಕಷ್ಟು ಸಾಕುನಾಯಿಗಳು ಮೃತಪಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಪೊನ್ನಂಪೇಟೆ ಹೋಬಳಿ ರೈತರು ಪೊನ್ನಂಪೇಟೆ ಅರಣ್ಯ ವಲಯಾಧಿಕಾರಿಗಳಿಗೆ ಮನವಿ ಮಾಡಿದೆ.
ಕಿರಗೂರು ಭಾಗದಲ್ಲಿ ನಿರಂತರ ಚಿರತೆ ದಾಳಿ ಮಾಡುತ್ತಿದ್ದು ಚಿರತೆಯನ್ನು ಸೆರೆ ಹಿಡಿಯಲು ಒತ್ತಾಯಿಸಿದ್ದು ,ವನ್ಯ ಜೀವಿಯಿಂದ ಸಾಕುನಾಯಿಗಳು ಮೃತಪಟ್ಟರೆ ಅವುಗಳಿಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು.