fbpx

ಲಿಂಕನ್ ಮಾನವೀಯತೆ…

ಅಬ್ರಹಾಂ ಲಿಂಕನ್ ವಕೀಲ ವೃತ್ತಿಯನ್ನು ನಡೆಸುತ್ತಿದ್ದ ದಿನಗಳಲ್ಲಿ ಒಬ್ಬಾತ ತಾನು ಇನ್ನೊಬ್ಬನಿಗೆ ನೀಡಿದ ಸಾಲವನ್ನು ವಸೂಲು ಮಾಡಲು ಅವನ ವಿರುದ್ಧ ಮೊಕದ್ದಮೆ ಹೂಡುವಂತೆ ಅವನನ್ನು ಕೇಳಿಕೊಂಡ. ತನ್ನ ಬಳಿಗೆ ಬಂದ ಕಕ್ಷಿದಾರನ ಕಡೆ ನ್ಯಾಯವಿರುವದು ಲಿಂಕನ್ರಿಗೆ ಮನದಟ್ಟಾಯಿತು‌.

ಸಾಲವನ್ನು ಪಡೆದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನ ದಾರುಣ ಪರಿಸ್ಥಿತಿಯ ವಿವರಗಳು ತಿಳಿದವು.  ಸಾಲ ಪಡೆದವನು ಒಬ್ಬ ಬಡ ರೈತ. ಪ್ರಾಮಾಣಿನಾಗಿದ್ದನು. ವ್ಯವಸಾಯದಲ್ಲಿ ತೀವ್ರವಾದ ನಷ್ಟವಾಗಿದ್ದರಿಂದ ಸಾಲವನ್ನು ಆತನಿಗೆ ತೀರಿಸಲು ಆಗಿರಲಿಲ್ಲ. ಆತನ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು.   ಈ ಮೊಕದ್ದಮೆಯಲ್ಲಿ ರೈತ ಸೋತರೆ ಆತನ ಕುಟುಂಬವೇ ಬೀದಿ ಪಾಲಾಗುವ ಪರಿಸ್ಥಿತಿ ಇತ್ತು. ಅದನ್ನು ತಿಳಿದುಕೊಂಡ ಲಿಂಕನ್ ಫಿರ್ಯಾದುದಾರರನ್ನು ಕಂಡು ಈ ಸಾಲದ ಹಣ ವಸೂಲಾದ ತಕ್ಷಣ ನೀವೇನು ಸಿರಿವಂತರಾಗುವುದಿಲ್ಲ. ಆದರೆ ಆ ಮನುಷ್ಯನ ಬದುಕು ಹಾಳಾಗುತ್ತದೆ.

ಆದ್ದರಿಂದ ಮೊಕದ್ದಮೆ ಹೂಡುವುದು ಬೇಡ. ಆದ್ದರಿಂದ ನಿಮ್ಮ ಉದಾರತೆ ನೆಲೆಗೊಳ್ಳುತ್ತದೆ. ನಿಮಗೆ‌ ಮತ್ತು ಆತನಿಗೂ ನೆಮ್ಮದಿ ಸಿಗುತ್ತದೆ ಅಂದರು. ಅವರ‌ ಮಾತಿಗೆ ಬೆಲೆ ಕೊಟ್ಟು ಫರ್ಯಾದುದಾರ ಒಪ್ಪಿಕೊಂಡ. ರೈತ ಕೇಸ್ ಇಂದ ಬಚಾವ್ ಆದ.                       

ಸಂಗ್ರಹ

error: Content is protected !!