ಲಾರಿ ಬೈಕ್ ಡಿಕ್ಕಿ:ಬೈಕ್ ಸವಾರ ಸಾವು

ಕೊಡಗು: ಕೆ.ಆರ್ ನಗರದಿಂದ ಗೋಣಿಕೂಪ್ಪಕ್ಕೆ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಿತಿಮತಿಯ ಭದ್ರಗೋಳದಲ್ಲಿ ನಡೆದಿದೆ.

ಮೃತ ಸಿದ್ದಾರ್ಥ್ 26 ಮೂಲತಃ ಕೇರಳದ ಕಣ್ಣೂರಿನವನಾಗಿದ್ದು ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂಬಂದಿಯ ಚಕ್ರಕ್ಕೆ ಸಿಲುಕಿ ಹೆಲ್ಮೆಟ್ ಧರಿಸಿದ್ದರೂ ತಲೆ ನಜ್ಜುಗುಜ್ಜಾಗಿ ಮೃತಪಟ್ಟಿದ್ದು, ಗೋಣಿಕೊಪ್ಪ ವೃತ್ತ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.