ಲಾರಿ ಅವಘಡ, ಅಮಾಯಕ ಮಹಿಳೆ ಬಲಿ

ಮೈಸೂರು ಕಡೆಯಿಂದ ಟಿವಿಎಸ್ ದ್ವಿಚಕ್ರ ವಾಹನ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆ ಮೇಲೆ ಮಗುಚ್ಚಿಬಿದ್ದುದರ ಪರಿಣಾಮ ಮಹಿಳೆ ಸ್ಥಳದಲ್ಲೆ ಮೃತಪಟ್ಟ ಘಟನೆ ಸುಂಟಿಕೊಪ್ಪದ ಗದ್ದೆ ಹಳ್ಳ ತಿರುವಿನಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆ ಅಪಘಾತಕ್ಕೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಹೆಸರು ಹಾಸನದ ರಾಮನಾಥಪುರದ ದಿಲ್ ಶಾದ್ 53 ಎಂದು ತಿಳಿದು ಬಂದಿದೆ. ಮಹಿಳೆ ನಿಂತಿದ್ದಲ್ಲಿ ಲಾರಿ ಮಗುಚಿ ಬಿದ್ದ ಪರಿಣಾಮ ಮಹಿಳೆ ಗುರುತು ಸಿಗದಷ್ಟರ ಮಟ್ಟಿಗೆ ನಜ್ಜುಗುಜ್ಜಾಗಿದ್ದಾಳೆ. ಲಾರಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು , ಸುಂಟಿಕೊಪ್ಪ ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.