fbpx

ಲಾಕ್ ಡೌನ್ – ಕೊಡಗು ಜಿಲ್ಲಾಡಳಿತದ ಆದೇಶ

ದಿನಾಂಕ 06.08.2021ರ ಆದೇಶದಂತೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಈ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಈ ಕೆಳಕಂಡ ಹೆಚ್ಚುವರಿ ನಿರ್ಬಂಧಗಳನ್ನು ಕೊಡಗು ಜಿಲ್ಲೆಯಾದ್ಯಂತ ದಿನಾಂಕ 16.08.2021ರ ಬೆಳಗ್ಗೆ 6:00 ಗಂಟೆಯ ವರೆಗೆ ಜಾರಿಯಲ್ಲಿರುವಂತೆ ಆದೇಶಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ

  1. ಪ್ರತಿ ದಿನ ರಾತ್ರಿ 9:00 ಗಂಟೆಯಿಂದ ಮರುದಿನ ಬೆಳಗ್ಗೆ 5:00ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
  2. ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ /ಮನೋರಂಜನೆ / ಶೈಕ್ಷಣಿಕ/ ಸಾಂಸ್ಕೃತಿಕ / ಧಾರ್ಮಿಕ ಕಾರ್ಯಕ್ರಮಗಳು ಇತ್ಯಾದಿ ಹಾಗೂ ಇಂತಹ ಅಧಿಕ ಸಂಖ್ಯೆಯಲ್ಲಿ ಒಗ್ಗೂಡುವಿಕೆಗಳನ್ನು ನಿಷೇಧಿಸಿದೆ.
  3. ಮದುವೆ / ಕೌಟುಂಬಿಕ ಕಾರ್ಯಗಳಿಗೆ ಗರಿಷ್ಟ 100 ಮಂದಿ ಮೀರತಕ್ಕದ್ದಲ್ಲ. ಅಂತ್ಯ ಸಂಸ್ಕಾರ ಮುಂತಾದ ಕಾರ್ಯಕ್ರಮಗಳಲ್ಲಿ ಗರಿಷ್ಟ 20 ಮಂದಿ ಮೀರತಕ್ಕದ್ದಲ್ಲ. ಆದಾಗ್ಯೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸತಕ್ಕದ್ದು.
  4. ಪೂಜಾ ಮಂದಿರ / ಪೂಜಾ ಸ್ಥಳ ( ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಮತ್ತು ಧಾರ್ಮಿಕ ಸ್ಥಳ)ಗಳನ್ನು ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವ ನಿಬಂಧನೆಗೆ ಒಳಪಡಿಸಿ ಕಾರ್ಯಾಚರಿಸಲು ಅನುಮತಿಸಿದೆ. ಆದರೆ, ಜಾತ್ರೆ, ಉತ್ಸವ, ಮೆರವಣಿಗೆ ಮತ್ತು ಅಧಿಕ ಸಂಖ್ಯೆಯಲ್ಲಿ ಒಗ್ಗೂಡುವಿಕೆಗಳಿಗೆ ಅವಕಾಶ ಇರುವುದಿಲ್ಲ.

ವಾರಾಂತ್ಯ ಕರ್ಫ್ಯೂ ವಿವರ

  1. ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಕಾರ್ಪೋರೇಷನ್ ಇತ್ಯಾದಿಗಳು, ತುರ್ತು ಮತ್ತು ಅತ್ಯವಶ್ಯಕ ಸೇವೆಗಳು ಹಾಗೂ ಕೋವಿಡ್ 19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಇಲಾಖೆ / ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಅಡ್ಡಿ ಇರುವುದಿಲ್ಲ.
  2. ತುರ್ತು ಮತ್ತು ಅತ್ಯವಶ್ಯಕ ಸೇವೆಗಳನ್ನು ನೀಡುವ ಎಲ್ಲಾ ಕೈಗಾರಿಕೆ / ಕಂಪೆನಿಗಳು / ಸಂಸ್ಥೆ ಗಳ ಕಾರ್ಯಾಚರಣೆ ಹಾಗೂ ಅದರ ಸಿಬ್ಬಂದಿಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ. ಆದಾಗ್ಯೂ ಅವರುಗಳು ಸಂಸ್ಥೆ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು.
  3. ವೈದ್ಯಕೀಯ ಸೇವೆಯ ಸಂಬಂಧ ರೋಗಿಯೊಂದಿಗೆ ರೋಗಿಯ ಉಪಚಾರಕರ ಓಡಾಟಕ್ಕೆ ಅಡ್ಡಿ ಇರುವುದಿಲ್ಲ.
  4. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುತ್ತಾ, ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್ ಗಳು, ಪಶು ಆಹಾರ ಮಳಿಗೆಗಳು, ಬೀದಿ ಬದಿ ವ್ಯಾಪಾರಿಗಳಿಗೆ, ಪಡಿತರ ನ್ಯಾಯ ಬೆಲೆ ಮಳಿಗೆ, ಸ್ಟಾಂಡ್ ಅಲೋನ್ ಮದ್ಯ ಮಾರಾಟ ಮಳಿಗೆ ( ಟೇಕ್ ಅವೇ ರೂಪದಲ್ಲಿ) ಬೆಳಗ್ಗೆ 5:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಕಾರ್ಯಾಚರಿಸಲು ಅವಕಾಶ ಇರುತ್ತದೆ. ಹೋಂ ಡೆಲಿವರಿ ಪದ್ದತಿಗೆ ಉತ್ತೇಜನ ನೀಡುವುದು.
  5. ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳಿಂದ ಟೇಕ್ ಅವೇ ರೂಪದಲ್ಲಿ ಪಡೆಯಲು ಹಾಗೂ ಹೋಂ ಡೆಲಿವರಿಗೆ ಅವಕಾಶ ಇರುತ್ತದೆ.
  6. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ/ಸ್ಟಾಪ್/ಸ್ಟಾಂಡ್ ಗಳಿಂದ ಪ್ರಯಾಣಿಕರನ್ನು ಕರೆತರಲು / ಕರೆದೊಯ್ಯಲು ಸಾರ್ವಜನಿಕ ಸಾರಿಗೆ, ಖಾಸಗಿ ಸಾರಿಗೆ ಮತ್ತು ಟ್ಯಾಕ್ಸಿಗಳಿಗೆ ಅನುಮತಿಸಿದೆ. ಆದಾಗ್ಯೂ ಪ್ರಯಾಣಿಕರು ಅಧಿಕೃತ ಟಿಕೆಟ್ ನ್ನು ಹೊಂದಿರ ತಕ್ಕದ್ದು ಮತ್ತು ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸತಕ್ಕದ್ದು.
  7. ಮದುವೆ / ಕೌಟುಂಬಿಕ ಕಾರ್ಯಗಳಿಗೆ ಗರಿಷ್ಟ 100 ಮಂದಿ ಮೀರತಕ್ಕದ್ದಲ್ಲ. ಅಂತ್ಯ ಸಂಸ್ಕಾರ ಮುಂತಾದ ಕಾರ್ಯಕ್ರಮಗಳಲ್ಲಿ ಗರಿಷ್ಟ 20 ಮಂದಿ ಮೀರತಕ್ಕದ್ದಲ್ಲ. ಆದಾಗ್ಯೂ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸತಕ್ಕದ್ದು.
    ಕೋವಿಡ್-19 ನಿರ್ವಹಣೆಯ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಈ ಕಛೇರಿಯಿಂದ ನೀಡುವ ಎಲ್ಲಾ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ವಿಪತ್ತು ನಿರ್ವಹಣಾ ಕಾಯ್ದೆ ಕಲಂ 51 ರಿಂದ 60ರ ಉಪಬಂಧಗಳು ಮತ್ತು ಭಾರತೀಯ ದಂಡಸಂಹಿತೆ ಕಲಂ 188 ಹಾಗೂ ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್-2020ರ ಕಲಂ 9ರ ಅಡಿಯಲ್ಲಿನ ಕಾನೂನು ಕ್ರಮಗಳು ಮತ್ತು ಕಾಲಕಾಲಕ್ಕೆ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ದಂಡನೆಗೆ ಒಳಗಾಗುವರು ಎಂದು ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
error: Content is protected !!