ಲಾಕ್ ಡೌನಲ್ಲೂ ಜಿಲ್ಲೆಗೆ ಪ್ರವಾಸಿಗರು ಬರುತ್ತಿರುವುದು ಖಂಡನೀಯ: ಪವನ್ ತೊಟಂಬೈಲು

ಚೆಯ್ಯಂಡಾಣೆ,ಜೂ 29
ಕೊಡಗಿಗೆ ಹೊರ ಜಿಲ್ಲೆಯ ಪ್ರವಾಸಿಗರು ಎಗ್ಗಿಲ್ಲದೆ ಬರುತ್ತಿದ್ದಾರೆ. ನಮ್ಮ ಕಣ್ಣಿನ ಎದುರು ಎಷ್ಟೋ ಅನಾಹುತಗಳು ನಡೆಯುತ್ತಿದ್ದರೂ ಕೂಡ ಕೊಡಗಿನ ಜನತೆ ಎಚ್ಚೆತ್ತುಗೊಂಡಂತೆ ಘೋಚರಿಸುತಿಲ್ಲ. ಮತ್ತೊಮ್ಮೆ ಕೊಡಗಿನಲ್ಲಿ ಕೊರೋನ ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೆಲವು ಅಧಿಕಾರಿಗಳನ್ನು ಕೇಳಿದ್ದಾಗ ಹೊರಜಿಲ್ಲೆಯಿಂದ ಬರಲು ಅವಕಾಶವಿದೆ ಆದರೆ ಅನುಮತಿ ಬೇಕು ಎನ್ನುತ್ತಾರೆ. ಇನ್ನು ಕೆಲವು ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ಮತ್ತೆ ಕೆಲವು ಅಧಿಕಾರಿಗಳು ಹೇಳುವಂತೆ ಹೊರಜಿಲ್ಲೆಯಿಂದ ಬರುವವರಿಗೆ ಕೋರೊನ ತಪಾಸಣೆ ಅಗತ್ಯ ಎನ್ನುತ್ತಾರೆ. ಆದರೆ ಈಗಾಗಲೇ ಕೊಡಗಿಗೆ ಪ್ರವಾಸಿಗರು ಕೂಡ ಯಾವುದೇ ಪ್ರಯಾಸವಿಲ್ಲದೆ ಪ್ರವಾಸ ಬರುತ್ತಿದ್ದು, ಜಿಲ್ಲೆಯ ಬಹುತೇಕ ಗಡಿಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ಆರಾಮವಾಗಿ ಬರುತ್ತಿದ್ದಾರೆ. ಈಗಾಗಲೇ ಕೊಡಗಿನ ಅದೆಷ್ಟು ಹೋಂಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್’ಗಳಲ್ಲಿ ಜನರು ಇಷ್ಟದಂತೆ ಬಂದು ಹೋಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ . ಜಿಲ್ಲೆಯ ಮೇಲೆ ಕಾಳಜಿ ಇರುವ ಕೆಲವು ಹೋಂಸ್ಟೇ ರೆಸಾರ್ಟ್ ಮಾಲಿಕರು ಸಂಪೂರ್ಣವಾಗಿ ತಿರಸ್ಕರಿಸಿ ಪ್ರವಾಸಿಗರಿಂದ ದೂರ ಉಳಿದಿದ್ದಾರೆ. ಅದರೆ ಕೆಲವರು ಕದ್ದು ಮುಚ್ಚಿ ಹೋಂಸ್ಟೇ,ರೆಸಾರ್ಟ್, ಲಾಡ್ಜ್ ಗಳಲ್ಲಿ ಹೊರ ಜಿಲ್ಲೆಯ ಪ್ರವಾಸಿಗರಿಗೆ ಅವಕಾಶ ನೀಡುವವರ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣವಾದ ಕ್ರಮವನ್ನು ಕೈಗೊಳ್ಳುದರ ಜೊತೆಗೆ ತಕ್ಷಣವೇ ಪರವಾನಗಿಯನ್ನು ರದ್ದುಗೊಳಿಸಬೇಕು.ಈಗಾಗಲೇ ಕೊಡಗಿನಲ್ಲಿ ಪಾಸಿಟಿವಿಟಿ ದರ ಹಾವುಏಣಿ ಆಟದಲ್ಲಿ ಇದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೊಡಗಿನ ಪರಿಸ್ಥಿತಿ ಹೇಗೆ ಎಂದು ಹೇಳಲು ಸಾದ್ಯವಿಲ್ಲ .3ನೇ ಅಲೆಯನ್ನು ಯೋಚನೆ ಮಾಡಿದ್ದರೆ ಈಗಲೇ ತುಂಬಾ ಭಯವಾಗುತ್ತಿದೆ, ಒಂದಷ್ಟು ಎಚ್ಚರ ತಪ್ಪಿದ್ದರು ಮತ್ತೊಮ್ಮೆ ಕೊಡಗು ಕೆಂಪು ವಲಯಕ್ಕೆ ತಲಪುವುದರಲ್ಲಿ ಯಾವುದೇ ಸಂಶಯವಿಲ್ಲ.ಜನರ ಹಿತದೃಷ್ಟಿಯಿಂದ ಕೊಡಗಿನಲ್ಲಿ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ, ಕೊಡಗಿನ ಗಡಿಯಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಕೊಡಗಿನ ಸ್ಮಶಾನದಲ್ಲಿ ಆರದ ಬೆಂಕಿಯನ್ನು ಒಮ್ಮೆ ಯೋಚಿಸಿ ನೋಡಿ.ಇದೀಗ ಆ ಸ್ಮಶಾನ ಒಂದಿಷ್ಟು ತಂಪಾಗುತ್ತಿದೆ, ಮತ್ತೆ ಆ ಸ್ಮಶಾನ ಹೊತ್ತಿ ಉರಿಯದಿರಲಿ . ಅದರಿಂದ ಕೊಡಗು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗ ಬೇಕಾಗಿ ಕೊಡಗಿನ ಜನತೆಯ ಪರವಾಗಿ ಕೊಡಗು ಜಿಲ್ಲಾ ಬಿಜೆಪಿ ಯುವ ಮೋಚ೯ದ ಉಪಾಧ್ಯಕ್ಷ ಪವನ್ ತೊಟಂಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿಯನ್ನು ಮಾಡಿದ್ದಾರೆ.