ಲಸಿಕೆ ಸಿಗದೆ ಸೊರಗಿದ ಬಡ ರಾಷ್ಟ್ರಗಳು!

ಜಿನಿವಾ, ಆ.11- ಕೋವಿಡ್ ಲಸಿಕೆ ನೀಡಿಕೆಯಲ್ಲಿ ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವೆ ಅಜಗಜಾಂತರ ವ್ಯತ್ಯಾಸ ಇರುವುದು ಈ ಕಾಲದ ನೈತಿಕ ದುರಂತಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಷಾದಿಸಿದೆ. ವಿಶ್ವದಲ್ಲಿ ಈವರೆಗೆ ನಾಲ್ಕು ಶತಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ ಆಫ್ರಿಕಾ ದೇಶದಲ್ಲಿ ಶೇ.1ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.

ರಾಜಕೀಯ ನಾಯಕರು, ಔಷಧಿ ಕಂಪೆನಿಗಲ ಸಿಇಒಗಳು, ಪ್ರಭಾವಿ ವ್ಯಕ್ತಿಗಳು, ನೀತಿ ನಿರೂಪಕರು ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರ ಸಲಹೆಗಾರ ಡಾ.ಬ್ರೂಸಿ ಅಲ್ಯಾವಾರ್ಡ್ ಹೇಳಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಜಗತ್ತನ್ನು ಮುನ್ನೆಡೆಸುವ 20 ನಾಯಕರ ಅಗತ್ಯವಿದೆ.

ಅವರು ಅವಮಾನಕಾರಿಯಾದ ಈ ತಾರತಮ್ಯವನ್ನು ನಿವಾರಣೆ ಮಾಡಬೇಕು.

ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಕನಿಷ್ಠ ಶೇ.10ರಷ್ಟು ಲಸಿಕೆ ನೀಡಬೇಕಿತ್ತು. ಆದರೆ ಕೆಲವು ದೇಶಗಳಲ್ಲಿ ಹೆಚ್ಚು ಲಸಿಕೆ ನೀಡಲಾಗಿದೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಲಸಿಕಾಕರಣ ಪ್ರಮಾಣ ಕಡಿಮೆ ಇದೆ. ಜಗತ್ತಿನ ಕೆಲವು ಭಾಗದ ರಾಷ್ಟ್ರಗಳಿಗೆ ಲಸಿಕೆ ಇಲ್ಲದಂತೆ ಮಾಡುವುದು ಕೆಟ್ಟ ಪರಿಸ್ಥಿತಿಯಾಗಿದೆ ಎಂದು ಅವರು ಸಾಮಾಜಿಕ ಜಾಲ ತಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಶ್ಲೇಷಿಸಿದ್ದಾರೆ.

error: Content is protected !!