fbpx

ಲಯನ್ಸ್ ಸಂಸ್ಥೆಗೆ ನೀಡಿದ್ದ ಜಾಗವನ್ನು ಹಿಂಪಡೆಯಲು ನಿರ್ಣಯ

ಕಣಿವೆ : ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸೇರಿದ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ 68 ರ ಒಂದು ಎಕರೆ ಜಾಗವನ್ನು ಕುಶಾಲನಗರದ ಲಯನ್ಸ್ ಸಂಸ್ಥೆಯಿಂದ ಹಿಂಪಡೆದು ಆಸ್ಪತ್ರೆಯ ಸದುದ್ದೇಶಗಳಿಗೆ ಬಳಸುವ ಬಗ್ಗೆ ಬುಧವಾರ ತಾಲೋಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ನಡೆದ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

1991 ರಲ್ಲಿ ಆಸ್ಪತ್ರೆಯ ಜಾಗವನ್ನು ಅಂತರಾಷ್ಟ್ರೀಯ ಕಣ್ಣಾಸ್ಪತ್ರೆ ತೆರೆಯುವ ಉದ್ದೇಶಕ್ಕೆ ಲಯನ್ಸ್ ಸಂಸ್ಥೆಗೆ ನೀಡಲಾಗಿತ್ತು. ಆದರೆ ಸಕಾಲದಲ್ಲಿ ಲಯನ್ಸ್ ಸಂಸ್ಥೆಯವರು ಈ ಜಾಗವನ್ನು ಬಳಕೆ ಮಾಡಿಕೊಳ್ಳಲು ವಿಫಲರಾದ ಕಾರಣ 1999 ರಲ್ಲಿ ಕೊಡಗು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದು ಲಯನ್ಸ್ ನಿಂದ ಜಾಗವನ್ನು ವಾಪಸ್ ಪಡೆಯಲು ಅಂಗೀಕಾರ ಮಾಡಲಾಗಿತ್ತು ಎಂದು ಶಾಸಕ ರಂಜನ್ ತಿಳಿಸಿದರು. ಲಯನ್ಸ್ ಗೆ ನೀಡಿದ ಜಾಗದ ಸರ್ವೇ ಮಾಡುವಂತೆ ತಹಸೀಲ್ದಾರ್ ಅವರಿಗೆ ಶಾಸಕರು ದೂರವಾಣಿಯಲ್ಲಿ ನಿರ್ದೇಶನ ನೀಡಿದರು. ಆಸ್ಪತ್ರೆಗೆ ಅಗತ್ಯ ವಿರುವ ವೈದ್ಯ ಸಿಬ್ವಂದಿಗಳ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಡುವ ಕುರಿತು ಸಭೆಯಲ್ಲಿ ವೈದ್ಯಾಧಿಕಾರಿಗಳು ಇಟ್ಟ ಕೋರಿಕೆಯನ್ನು ಮನ್ನಿಸಿದ ಶಾಸಕರು ಈ ಬಗ್ಗೆ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸುವುದಾಗಿ ಹೇಳಿದರು. ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಕೆ.ಆರ್.ಮಂಜುಳಾ, ರಕ್ಷಾ ಸಮಿತಿ ಸದಸ್ಯ ಚಂದ್ರು,ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಸೋಮವಾರಪೇಟೆ ತಾಲೋಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್, ಆಸ್ಪತ್ರೆಯ ಕಛೇರಿ ಅಧೀಕ್ಷಕಿ ಅನಿತಾ ಸೋಮಾರಾಧ್ಯ, ಷಣ್ಮುಗನ್,‌ ವಿಶು, ಮಂಜುಳ‌ ಶುಶ್ರೂಷಕಿ ಮತ್ತು ಔಷಧಾಲಯದ ಹಿರಿಯ ಅಧಿಕಾರಿ ಬಿ.ನಟರಾಜು ಇದ್ದರು.

error: Content is protected !!