ರೋಗಿಗಳ ಕೊರತೆ ಇದ್ದರೆ ಜಾಹೀರಾತು ಕೊಡಿ: ಕೇಂದ್ರಕ್ಕೆ ಚಿದಂಬರಂ ಲೇವಡಿ!

ನವದೆಹಲಿ, ಏ.21- ದೇಶದಲ್ಲಿ ಲಸಿಕೆ ಮತ್ತು ಔಷಧಿ ಕೊರತೆ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ಅವರ ಮಾತನ್ನು ನಂಬೋಣ. ಬಹುಶಃ ರೋಗಿಗಳ ಕೊರತೆ ಇರಬಹುದು. ಅದಕ್ಕಾಗಿ ಜಾಹೀರಾತು ಕೊಟ್ಟು ಚಿಕತ್ಸೆ ಪಡೆದುಕೊಳ್ಳಲು ರೋಗಿಗಳಿಗೆ ಮನವಿ ಮಾಡಿ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವಿಟ್‍ಗಳ ಮೂಲಕ ಕೇಂದ್ರ ಸಚಿವರ ಹೇಳಿಕೆಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಲಸಿಕೆ ಕೊರತೆ ಇಲ್ಲ ಎಂದಾದ ಮೇಲೆ ಅದನ್ನು ಹಾಕಿಸಿಕೊಳ್ಳುವವರ ಕೊರತೆ ಇರಬಹುದು. ಅದಕ್ಕಾಗಿ ಅರ್ಜಿ ಆಹ್ವಾನ ಮಾಡಿ, ಜಾಹೀರಾತು ನೀಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈಲ್ವೆ ನಿಲ್ದಾಣಗಳಲ್ಲಿ ಜನ ಗುಂಪು ಗೂಡುತ್ತಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ನಾವು ಟಿವಿಗಳಲ್ಲಿ ಜನ ಉದ್ದುದ್ದ ಸಾಲು ಗಟ್ಟಿರುವುದನ್ನು ನೋಡಿದ್ದೇವೆ.

ನಾವು ಟಿವಿಗಳಲ್ಲಿ ಜನ ಉದ್ದುದ್ದ ಸಾಲು ಗಟ್ಟಿರುವುದನ್ನು ನೋಡಿದ್ದೇವೆ. ಬಹುಶಃ ಅವರು ರೈಲ್ವೆ ನಿಲ್ದಾಣದ ಭದ್ರತೆಗೆ ರೈಲ್ವೆ ಪೊಲೀಸರಿಗೆ ಸಹಾಯ ಮಾಡಲು ಹೋಗಿರಬಹುದೆಂದು ಮತ್ತೊಂದು ಟ್ವಿಟ್‍ನಲ್ಲಿ ವ್ಯಂಗ್ಯವಾಡಿದ್ದಾರೆ.

ಸರ್ಕಾರ ಚುನಾವಣೆ ನಡೆಸಲು ಹೆಚ್ಚು ಆಸಕ್ತಿ ತೋರಿಸಿದೆ. ವೈದ್ಯಕೀಯ ದುರಂತಗಳಿಗೆ ಬಿಜೆಪಿ ಏಕಮಾತ್ರ ಹೊಣೆಯಾಗಬೇಕಾಗಿದೆ. ಆರೋಗ್ಯ ವ್ಯವಸ್ಥೆ ಕುಸಿದುಹೋಗುತ್ತಿದ್ದರೂ ಚುನಾವಣೆಯಲ್ಲೇ ಸಮಯ ವ್ಯರ್ಥ ಮಾಡಿದ ಬಿಜೆಪಿಗೆ ಪಶ್ಚಿಮ ಬಂಗಾಳದ ಜನತೆ 6ನೇ ಹಾಗೂ 7ನೇ ಹಂತದ ಮತದಾನದಲ್ಲಿ ಪಾಠ ಕಲಿಸಬೇಕೆಂದು ಮನವಿ ಮಾಡಿದ್ದಾರೆ.

ಶವಾಗಾರ, ಚಿತಾಗಾರ ಮತ್ತು ಆಸ್ಪತ್ರೆಗಳ ಮುಂದೆ ಆಯಂಬುಲೆನ್ಸ್‍ಗಳು ಸಾಲುಗಟ್ಟಿ ನಿಂತಿವೆ. ಚಿಕಿತ್ಸೆ ಸಿಗದೆ ರೋಗಿಗಳು ಒದ್ದಾಡುತ್ತಿದ್ದಾರೆ. 2020ರ ಏಪ್ರಿಲ್‍ನಿಂದಲೂ ಸರ್ಕಾರ ಏನು ಮಾಡುತ್ತಿತ್ತು ? ಈ ಮೊದಲಿನಿಂದಲೂ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಚಿದಂಬರಂ ಕಿಡಿಕಾರಿದ್ದಾರೆ.
ವಲಸಿಗ ಕಾರ್ಮಿಕರು ತಮ್ಮ ಊರಿಗೆ ತೆರಳಲು ಉದ್ದುದ್ದ ಸಾಲುಗಳಲ್ಲಿ ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದಾರೆ. ಇದನ್ನು ನೋಡುತ್ತಿದ್ದರೆ ಹೃದಯ ಕಲಕುತ್ತಿದೆ ಎಂದು ಅವರು ವಿಷಾದಿಸಿದ್ದಾರೆ.

error: Content is protected !!