ರೊಚ್ಚಿಗೆದ್ದ ರೈತರಿಂದ ಜಿಯೋ ಟವರ್ರಿಗೆ ಹಾನಿ

ಚಂಡೀಗಢ: ಪಂಜಾಬ್​​​ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಸಂದರ್ಭದಲ್ಲಿ ಸುಮಾರು 1,561 ಜಿಯೋ ಮೊಬೈಲ್​ ಟವರ್​​ಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅಮರಿಂದರ್ ಸಿಂಗ್ ಕಠಿಣ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪಂಜಾಬ್​​ನ 22 ಜಿಲ್ಲೆಗಳಲ್ಲಿ 21,306 ಮೊಬೈಲ್ ಟವರ್​ಗಳಿದ್ದು, ಇದರಲ್ಲಿ 1,561 ಟವರ್​​ಗಳಿಗೆ ಹಾನಿಯಾಗಿದೆ. ಪವರ್ ಕಟ್​, ಜನರೇಟರ್​​ ಕಳ್ಳತನ, ಟವರ್​ಗಳಿಗೆ ಬೆಂಕಿ ಇಟ್ಟು ಹಾನಿ ಮಾಡಲಾಗಿದೆ. ಇದರಲ್ಲಿ 433 ಟವರ್​ಗಳನ್ನು ಮತ್ತೆ ರಿಪೇರಿ ಮಾಡಿ ಸರಿಪಡಿಸಲಾಗಿದೆ.

ಮುಖೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಸಂಸ್ಥೆಯ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ರೈತರ ಕಾಯ್ದೆಗಳಿಗೆ ಅಂಬಾನಿಗೆ ಲಾಭವಾಗಲಿದೆ ಎಂಬ ಭಾವನೆಯ ಹಿನ್ನೆಲೆಯಲ್ಲಿ ಮೊಬೈಲ್ ಟವರ್ಗಳಿಗೆ ಹಾನಿ ಮಾಡಲಾಗುತ್ತಿದೆ.

ರೈತರ ನಡೆಯ ಕುರಿತು ಸಮಾಧಾನ ವ್ಯ ಕ್ತಪಡಿಸಿರುವ ಪಂಜಾಬ್ ಸಿಎಂ, ಇಂತಹ ಘಟನೆಗಳಿಂದ ರಾಜ್ಯದಲ್ಲಿ ಸಂವಹನ ನಡೆಸಲು ಸಮಸ್ಯೆ ಎದುರಾಗಲಿದೆ. ಕೊರೊನಾ ಕಾರಣದಿಂದ ಹಲವು ತಜ್ಞರು ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಅವರಿಗೆ ನೆಟ್ ಸಿಗದಿದ್ದ್ದದರೆ ಅವರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 1.75 ಲಕ್ಷ ಸ್ಮಾರ್ಟ್ಫೋನ್ಗಳನ್ನು ನೀಡಿದೆ. ಬೋರ್ಡ್ ಪರೀಕ್ಷೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.

error: Content is protected !!