fbpx

ರೈತ ಸಂಘದಿಂದ ಸೆಸ್ಕ್ ಕಛೇರಿ ಮುತ್ತಿಗೆಯ ಎಚ್ಚರಿಕೆ

ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿನ ಬಿರುನಾಣಿ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದು ಸಮಸ್ಯೆ ಬಗೆ ಹರಿಯದಿದ್ದಲ್ಲಿ ಸೆಸ್ಕ್ ಕಚೇರಿಗೆ ಬೀಗ ಜಡಿಯಲು ರಾಜ್ಯ ರೈತ ಸಂಘ ಕೊಡಗು ಘಟಕ ನಿರ್ಧರಿಸಿದೆ.

ಬಿರುನಾಣಿಯಲ್ಲಿ ನಡೆದ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮುಂದಾಳತ್ವದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು ಸೆಪ್ಟೆಂಬರ್ 5 ರವರೆಗೆ ಗಡುವು ನೀಡಲಾಗಿದೆ.

ಸಮಸ್ಯೆ ಬಗೆಹರಿಯದಿದ್ದಲ್ಲಿ ಅದೇ ದಿನ ಗೋಣಿಕೊಪ್ಪದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಗೆ ಬೀಗ ಜೋಡಿಸುವ ನಿರ್ಣಯವನ್ನು ಸಂಘದ ಸಭೆಯಲ್ಲಿ ನಿರ್ಧರಿಸಿದೆ.

error: Content is protected !!