ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ ದೀದಿ!

ನವದೆಹಲಿ (ಡಿ 23) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ.ಈ ತಿಂಗಳಲ್ಲಿ ಎರಡನೇ ಸಾರಿ ಟಿಎಂಸಿ ನಾಯಕಿ ರೈತ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಮಮತಾ ಕ್ಯಾಬಿನೆಟ್ ಸಭೆಗೆ ಬಾರದ ನಾಲ್ವರು ಮಿನಿಸ್ಟರ್ಸ್
ಟಿಎಂಸಿಯ ಐದು ಜನ ಸಂಸದರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಬಂದಿದ್ದಾರೆ. ಮಮತಾ ಆದೇಶದಂತೆ ಡೆರೆಕ್ ಓಬ್ರಿಯಾನ್, ಸತಾಬ್ದಿ ರಾಯ್, ಪ್ರಸೂನ್ ಬ್ಯಾನರ್ಜಿ, ಪ್ರತಿಮಾ ಮಂಡಲ್, ಎಂಡಿ ನದಿಮೂಲ್ ಹಕ್ವೆ ರಾಷ್ಟ್ರೀಯ ಹೆದ್ದಾರಿಯಲ್ಲಿಮ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿದ್ದಾರೆ.ರೈತರ ಸಮಸ್ಯೆ ಬಗ್ಗೆ ದನಿ ಎತ್ತುತ್ತೇನೆ ಎಂದು ಮಮತಾ ಭರವಸೆ ನೀಡಿದ್ದಾರೆ.