fbpx

ರೈತರಿಗೆ ಕೀಟ, ಕಳೆನಾಶಕ ಕಟಾವು ಮುಂದೂಡುವಂತೆ ಕೆವಿಕೆ ಸೂಚನೆ

ನವೆಂಬರ್ 17 ರ ವರೆಗೆ ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವ ಹಿನ್ನಲೆಯಲ್ಲಿ ಭಾರತೀಯ ಹವಮಾನ ಇಲಾಖೆ ನೀಡಿರುವ ಮಾಹಿತಿ ಮೇರೆಗೆ ಕೊಡಗು ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಸಸ್ಯ ಸಂರಕ್ಷಣೆಗೆ ಬಳಸುವ ಕೀಟ,ಕಳೆನಾಶಕ ಸಿಂಪಡನೆ ಸೇರಿದಂತೆ ಕಟ್ವು ಕಾರ್ಯ ಮುಂದೂಡುವಂತೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರ ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಮಾಮ ಹಗುರವಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರೈತರು ಮೇಲ್ಕಂಡ ಕೃಷಿ ಚಟುವಟಿಕೆ ಮುಂದೂಡುವಂತೆ ಸಲಹೆ ಮಾಡಿದೆ.

error: Content is protected !!