fbpx

ರೂಪದರ್ಶಿಯಾಗಿದ್ದವರು ನಟಿಯಾಗುತ್ತಿರುವ ಕಹಾನಿ…

ಪದವಿ ಶಿಕ್ಷಣದಲ್ಲಿಯೇ ಇದ್ದಾಗ ಐಶ್ವರ್ಯ ಸಿಂಧೋಗಿ ಅವರು ನೃತ್ಯ, ಛದ್ಮವೇಷ, ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಆ ಸಂದರ್ಭದಲ್ಲೇ ಅಂತರ್ ಕಾಲೇಜು ಸ್ಪರ್ಧೆಯೊಂದು ಇದ್ದಾಗ ಅರುಣ್ ಎಂಬುವವರು ಗುರುತಿಸಿ, ಮೊದಲಿಗೆ ಅವಕಾಶ ನೀಡಿದರು. ‘Half Mental’ ಎಂಬ ಸಿನಿಮಾದಲ್ಲಿ ಜೀವ ಹಾನಿ ಆಗುವ ಮುನ್ನ’ ಅನ್ನೋ ಹಾಡಿನಲ್ಲಿ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡರು.


ಫಿಲಂ ಚೇಂಬರಿಗೆ ಐಶ್ವರ್ಯ ಅವರು ಫಿಲಂ ಚೇಂಬರಿಗೆ ಹೋಗಿದ್ದಾಗ, ನಿರ್ಮಾಪಕರೊಬ್ಬರ ಪರಿಚಯವಾಗಿ ದುನಿಯಾ ವಿಜಯ್ ಅವರ ನಟನೆ ಸಿಂಹಾದ್ರಿ ಸಿನಿಮಾದಲ್ಲಿ ಹೀರೋ ತಂಗಿ ಪಾತ್ರ ದೊರಕಿತು. ಶಿವ ಮಣಿ ಅವರ ನಿರ್ದೇಶನವಿದ್ದ ಸಿನಿಮಾ ಒಳ್ಳೆಯ ಅನುಭವ ನೀಡಿತು. ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಸಿಂಹಾದ್ರಿ ಸಿನಿಮಾದಲ್ಲಿ ಐಶ್ವರ್ಯ ಅವರ ನಟನೆ ಮೆಚ್ಚಿ ‘ಜಾಕ್ಸನ್’ ಸಿನಿಮಾದಲ್ಲಿ ಪಾತ್ರ ನೀಡಿದರು.

ಇಬ್ಬರು ನಾಯಕಿಯ ಪೈಕಿ ಒಬ್ಬರಾಗಿ ಅಭಿನಯಿಸಿ, ಒಳ್ಳೆಯ ಹೆಸರು ಮಾಡಿದರು. ಐಶ್ವರ್ಯ ಅವರು ಮೊದಲು ನಟಿಸಿದ ಸೃಜನ್ ಲೋಕೇಶ್ ಅವರು ನಾಯಕನಾಗಿದ್ದ ಸಿನಿಮಾ ‘ಸಪ್ನೋಂಕಿ ರಾಣಿ’ ಚಿತ್ರ ಜಾಕ್ಸನ್ ನಂತರ ಬಿಡುಗಡೆ ಆಯಿತು.


ಹೋಟೆಲ್ ಮ್ಯಾನೇಜ್ ಮೆಂಟ್ ಪದವಿ ವ್ಯಾಸಂಗದ ಜೊತೆ ಜೊತೆಗೆ ಇಷ್ಟೂ ಸಿನಿಮಾಗಳಲ್ಲಿ ನಟಿಸಿದ್ದ ಐಶ್ವರ್ಯ ಅವರು ಅಷ್ಟೊತ್ತಿಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದರು. ಲೋಹಿತ್ ಅವರ ನಿರ್ದೇಶನದ, ಪ್ರಿಯಾಂಕ ಉಪೇಂದ್ರ ಅವರು ನಾಯಕಿಯಾಗಿದ್ದ ‘ಮಮ್ಮಿ’ ಸಿನಿಮಾದಲ್ಲಿ ನಾಯಕಿ ತಂಗಿ ಪಾತ್ರದಲ್ಲಿ ನಟಿಸಿದರು. ಚಲನಚಿತ್ರ ಬಹಳ ವಿಭಿನ್ನವಾಗಿ ಮೂಡಿ ಬಂದಿತ್ತು. ಮತ್ತು ಮೂರು ನಾಲ್ಕೇ ಪಾತ್ರಗಳು ಇದ್ದಿದ್ದರಿಂದ ಐಶ್ವರ್ಯ ಅವರು ಗಾಂಧಿನಗರದಲ್ಲಿ ಗುರುತಿಸಿಕೊಂಡರು. ಈ ಸಿನಿಮಾ ಅವರಿಗೆ Break ಕೂಡ ತಂದುಕೊಟ್ಟಿತು.

ಅದಾದ ಮೇಲೆ ‘ಭುಜಂಗ’ ಸಿನಿಮಾದಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರೊಂದಿಗೆ ಹೀರೋನ ಪರಿಚಯಿಸುವ ಹಾಡಿನಲ್ಲಿ ಜೊತೆಗೆ ಹೆಜ್ಜೆ ಹಾಕಿದರು. ಮೂಲತಃ ಬೆಂಗಳೂರಿನವರೇ ಆದ ಐಶ್ವರ್ಯ ಅವರ ತಾಯಿಯ ಹೆಸರು ವನಿತಾ ಶ್ರೀ ತಂದೆಯ ಹೆಸರು ಸುರೇಶ್. ಸಿನಿಮಾ ರಂಗಕ್ಕೆ ಕಾಲಿಟ್ಟ ಹೊಸತರಲ್ಲಿ ಎಲ್ಲೇ ಚಿತ್ರೀಕರಣವಿದ್ದರೂ ಜೊತೆಗೆ ತಂದೆ ಬಂದು ಇರುತ್ತಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.


ಸದ್ಯಕ್ಕೆ ಐಶ್ವರ್ಯರವರು ಹಾರರ್ ಚಿತ್ರ ‘ಮೈಲಾಪುರ’ದಲ್ಲಿ ಬಿಝಿಯಾಗಲಿದ್ದಾರೆ‌. ಕಲಸ್೯ ಕನ್ನಡ ವಾಹಿನಿಯ ಹೊಸ ಕಿರುತೆರೆ ಧಾರಾವಾಹಿಯಲ್ಲಿ ನಟನೆಯ ಅಫರ್ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನಟಿಸಲಿದ್ದಾರೆ. ‘ಮಮ್ಮಿ’ ಚಿತ್ರದ ನಂತರ ‘ಮಟಾಶ್’ ಮತ್ತು ‘ಸಂಯುಕ್ತ’ ಸಿನಿಮಾಗಳಲ್ಲಿ ನಟಿಸಿದ ಐಶ್ವರ್ಯ ಅವರು ಅದರಲ್ಲೂ ಗ್ಲಾಮರಸ್ ಆಗಿ ನಟಿಸಿದ್ದರು.

ಸಿನಿಮಾ ರಂಗದಲ್ಲಿ ಮತ್ತಷ್ಟು ಸಾಧನೆ ಮಾಡುವ ಆಶಯವನ್ನು ವ್ಯಕ್ತ ಪಡಿಸಿದ ಅವರು ನಮ್ಮ ಸುದ್ದಿ ಸಂತೆ ವೆಬ್ ಸೈಟ್ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿ ಶುಭ ಕೋರಿದರು. ಐಶ್ವರ್ಯ ಅವರಿಗೆ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ಚಾನ್ಸ್ ಗಳು ಸಿಕ್ಕಿ ಉನ್ನತ ಮಟ್ಟಕ್ಕೆ ಬೆಳೆಯುವಂತಾಗಲಿ ಎಂದು ಸುದ್ದಿ ಸಂತೆ ತಂಡ ಅವರಿಗೆ ಹಾರೈಸುತ್ತದೆ.

error: Content is protected !!