ರಾಷ್ಟ್ರ ಮಟ್ಟದ ಕಾರ್ ರೇಸಲ್ಲಿ ಕೊಡಗಿನ ತಂಡಕ್ಕೆ ಎರಡನೇ ಸ್ಥಾನ

ಇಂಡಿಯನ್ ನ್ಯಾಷನಲ್ ಕಾರ್ ರೇಸ್ ನಲ್ಲಿ ಕೊಡಗಿನ ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ.
ಚೆನ್ನೈ,ಆಂಧ್ರಪ್ರದೇಶ, ಕೊಯಮತ್ತೂರು, ಬೆಂಗಳೂರು ಸೇರಿದಂತೆ ಇತರೆಡೆ ನಡೆದ ಇಂಡಿಯನ್ ನ್ಯಾಷನಲ್ ರಾಲಿಯಲ್ಲಿ ದೇಶದ 44 ಪ್ರಬಲ ತಂಡಗಳು ಭಾಗವಹಿಸಿದ್ದು, ಸೌತ್ ಇಂಡಿಯಾ ರೇಸ್ ನ 5 ಹಂತದ ಅಪಾಯಕಾರಿ ರಸ್ತೆಗಳ ದಿನಕ್ಕೆ 80 ಕಿಲೋಮೀಟರ್ ಎರಡು ದಿನ ಒಟ್ಟು ಸುಮಾರು 150 ಕಿಮೀ ಚಾಲೆಂಚ್ ಆಗಿತ್ತು.

ಮಂಗಳೂರಿನ ನುರಿತ ರೇಸರ್ ಯ(ಡ್ರೈವರ್) ಮಂಗಳೂರು ಮೂಲದ ಡೀನ್ ಮಸ್ಕರೇನಲ್ ಮತ್ತು ಕೊಡಗಿನ ಗಗನ್ ಕರುಂಬಯ್ಯ ಜೋಡಿ ಜೆಕೆ ಟಯರ್ ಪ್ರಾಯಜಕತ್ವದಲ್ಲಿ ವೋಕ್ಸ್ ವ್ಯಾಗನ್ ಪೋಲೋ ಕಾರಿನಲ್ಲಿ ರೋಚಕ ಪ್ರದರ್ಶನ ನೀಡಿದ್ದು,ಎರಡನೇ ಹಂತದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ಒಂದು ಲಕ್ಷ ನಗದು ಬಹುಮಾನ ನೀಡಲಾಯಿತು.

ಜಿಪ್ಸಿ ಕ್ಲಾಸ್ ನಲ್ಲಿ ಕಾರ್ಯಪ್ಪ ಮತ್ತು ಅಭಿನವ್, ಐಸ್ ಆರ್ ಸಿ3ನ ಪೋಲೋ ಕ್ಲಾಸ್ ನಲ್ಲಿ ತಿಮ್ಮಣ್ಣ ಭಾಗವಹಿಸಿ ಹಲವು ಹಂತದಲ್ಲಿ ಸಾಧನೆ ಮಾಡಿದ್ದರು.

error: Content is protected !!